ಜಿಲ್ಲೆ

ಕುಸ್ತಿ ಪಂದ್ಯಾವಳಿಗೆ ರಾಜ್ಯ ತಂಡ ಆಯ್ಕೆ

ಮೈಸೂರು: ಭಾರತೀಯ ಶೈಲಿ ಕುಸ್ತಿ ಮಹಾಸಂಘದಿಂದ ಜ.5ರಿಂದ 8 ರವರೆಗೆ ತೆಲಂಗಾಣದಲ್ಲಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗೆ ರಾಜ್ಯ ತಂಡವನ್ನು ಡಿ.30ರಂದು ಆಯ್ಕೆ ಮಾಡಲಾಗುವುದು.
ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಂಚಾಲಕ ಅಮೃತ್ ಪುರೋಹಿತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದ್ ಕೇಸರಿ ಮತ್ತು ಸೀನಿಯರ್ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವ ಪುರುಷರು 55ಕೆಜಿ, 60ಕೆಜಿ, 70 ಕೆಜಿ, 75 ಕೆಜಿ, 80, 90 ಮತ್ತು 85 ರಿಂದ 145 ಕೆಜಿ ವಿಭಾಗದಲ್ಲಿ ಆಯ್ಕೆಗೆ ಹಾಜರಾಗಬಹುದು. ಮಹಿಳೆಯರ ವಿಭಾಗದಲ್ಲಿ 48, 52, 56, 62, 68 ಹಾಗೂ 65 ರಿಂದ 90 ಕೆಜಿಯವರೆಗಿನವರು ಆಯ್ಕೆಗೆ ಹಾಜರಾಗಬಹುದು ಎಂದು ಹೇಳಿದರು.
ಸಂಘಟಕರಾದ ಲೋಕೇಶ್, ದೊರೆಸ್ವಾಮಿ, ರವಿ, ಸಿದ್ದರಾಜು, ಜೀವನ್ ಇದ್ದರು.