ಹುಬ್ಬಳ್ಳಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ವಾರಣಾಸಿ ನಗರದಲ್ಲಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಾಲೂಕಿನ ಕುಸುಗಲ್ಲ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದರು.
ಧರ್ಮ ಜಾಗೃತಿ ಕೈಂಕರ್ಯಕ್ಕಾಗಿ ಪ್ರಸ್ತುತ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ್ಲ ಸಂಚಾರ ಕೈಕೊಂಡಿರುವ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಭಕ್ತರ ಕೋರಿಕೆಯಂತೆ ಗ್ರಾಮಕ್ಕೆ ಭೇಟಿ ನೀಡಿ ಭಕ್ತ ಸಮೂಹದ ಗೌರವ ಸ್ವೀಕರಿಸಿದರು. ಗ್ರಾಮದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
ಗ್ರಾಮದ ಹಿರೇಮಠಕ್ಕೂ ಆಗಮಿಸಿ ಆಶೀರ್ವದಿಸಿದರು. ಹಿರೇಮಠದ ಲಿಂ. ಗುರುಸಿದ್ಧಯ್ಯಸ್ವಾಮಿ ಅವರು ರಂಭಾಪುರಿ ಪೀಠದ ಲಿಂ. ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಸೇವೆಗೈದ ವಿಚಾರಗಳನ್ನು ನೆನಪಿಸಿಕೊಂಡರು. ಗಿರಿಜಾದೇವಿ ಹಿರೇಮಠ, ಜಗದೀಶ ಹಿರೇಮಠ, ರಾಜೇಶ್ವರಿ ಹಿರೇಮಠ, ಶಿವಪ್ರಭಾ ಹಿರೇಮಠ ಮತ್ತು ಗಂಗಾಧರ ಸಂಕರಡ್ಡಿ, ಇತರರು ಇದ್ದರು.