ತರೀಕೆರೆ: ತಾಲೂಕಿನ ಬಹುತೇಕ ಕಡೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಜನ ಮನೆಯಿಂದ ಹೊರಗೆ ಬಾರದಂತಾಗಿದೆ.
ಕೆಮ್ಮಣ್ಣುಗುಂಡಿಯ ಗಿರಿಶ್ರೇಣಿ, ಲಕ್ಕವಳ್ಳಿ, ರಂಗೇನಹಳ್ಳಿ, ಬಾವಿಕೆರೆ, ಎಂ.ಸಿ.ಹಳ್ಳಿ, ಅಮೃತಾಪುರ, ಬೇಲೇನಹಳ್ಳಿ, ಸಿದ್ದರಹಳ್ಳಿ, ಕೆ.ಹೊಸೂರು, ಇಟ್ಟಿಗೆ, ಹಾದಿಕೆರೆ ಇತರ ಕಡೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮಳೆಯ ತೇವಕ್ಕೆ ಉಡೇವಾ ಗ್ರಾಮದಲ್ಲಿ ಹುಲಿಗಿರಿ ಗೋವಿಂದಪ್ಪ, ಕರಕುಚ್ಚಿ ಗ್ರಾಮದಲ್ಲಿ ಪಾರ್ವತಮ್ಮ ಎಂಬುವವರ ಮನೆಗೋಡೆ ಬುಧವಾರ ರಾತ್ರಿ ಛಾವಣಿ ಸಮೇತ ಕುಸಿದಿವೆ. ಅದೃಷ್ಟವಶಾತ್ ಬೇರೆ ಯಾವುದೇ ಹಾನಿ ಸಂಭವಿಸಿಲ್ಲ.