ಕುಶಾಲನಗರಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಎಚ್.ವಿ.ಶಿವಪ್ಪ, ಕೆ.ಎಸ್.ಮೂರ್ತಿ, ಆರ್.ವಿ.ಗಂಗಾಧರ್, ಬಿ.ಜಿ.ಮಹೇಶ್, ಸುರೇಶ, ಶಾಂಬಶಿವಮೂರ್ತಿ ಇತರರು ಹಾಜರಿದ್ದರು. 
ಜಿಲ್ಲೆ

ಕುಶಾಲನಗರಕ್ಕೆ ಸುತ್ತೂರು ಜಾತ್ರೆ ಪ್ರಚಾರ ರಥ

ಕುಶಾಲನಗರ: ಪಟ್ಟಣಕ್ಕೆ ಸೋಮವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ರಥವನ್ನು ಸ್ವಾಗತಿಸಿ ಮಾತನಾಡಿದ ಕುಶಾಲನಗರ ಪುರಸಭಾ ಅಧ್ಯಕ್ಷ ಜಯವರ್ಧನ, ನಾಡಿನಾದ್ಯಂತ ವಿದ್ಯಾಲಯಗಳನ್ನು ತೆರೆದು ಅನ್ನ, ಅಕ್ಷರ ಹಾಗೂ ವಸತಿ ಸಹಿತ ಮಹಾದಾಸೋಹ ಮಾಡುತ್ತಿರುವ ಸುತ್ತೂರು ಮಠ ಜಗತ್ತಿಗೆ ಮಾದರಿಯಾಗಿದೆ. ಜಾತಿ, ಧರ್ಮಗಳನ್ನು ಮೀರಿ ನಿರಂತರ ಸೇವೆಯಲ್ಲಿರುವ ಶ್ರೀಮಠದಿಂದ ಜ.18ರಿಂದ 23ರವರೆಗೆ ನಡೆಯುವ ಸುತ್ತೂರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಬೇಕೆಂದು ಕರೆಕೊಟ್ಟರು.

ಸುತ್ತೂರು ಜಾತ್ರೆಯ ಪ್ರಚಾರ ಸಮಿತಿ ಸಂಚಾಲಕ ಬಿ.ಆರ್.ಪಂಚಾಕ್ಷರಿ ಅವರು ಮಠದ ಪರಂಪರೆ ಹಾಗೂ ಜಾತ್ರಾ ಉದ್ದೇಶಗಳ ಬಗ್ಗೆ ವಿವರಿಸಿದರು. ವೀರಶೈವ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರ್, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಪುರಸಭಾ ಸದಸ್ಯ ಸುರೇಶ್, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಸಾಂಬಶಿವಮೂರ್ತಿ, ಕುಶಾಲನಗರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಮಧುಸೂದನ್, ಪ್ರಮುಖರಾದ ಬಿ.ನಟರಾಜು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ, ತಾಲೂಕು ಜನಪದ ವೇದಿಕೆ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಲೇಖನಾ, ದಸಂಸ ಮುಖಂಡ ಕೆ.ಬಿ.ರಾಜು, ಕೃಷ್ಣಪ್ಪ, ಸದಾಶಿವ, ಲೋಕೇಶ್, ಗೀತಾ, ಬೇಬಿ, ಮನುದೇವಿ ಮೊದಲಾದವರಿದ್ದರು.