ಚಿಕ್ಕಮಗಳೂರು: ಗಾರೆ ಕೆಲಸ ಮಾಡುವ ಕಾರ್ಮಿಕರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸುವ ಉz್ದೆÃಶದಿಂದ ಮಾ.೨೦ ಮತ್ತು ಮಾ. ೨೧ರಂದು ನಗರದ ಕಲ್ದೊಡ್ಡಿಯ ನಿರ್ಮಿತಿ ಕೇಂದ್ರದ ಆವರಣದಲ್ಲಿ ಕುಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ. ರಮೇಶ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್, ಚಿಕ್ಕಮಗಳೂರು ನಿರ್ಮಿತಿ ಕೇಂದ್ರ ಹಾಗೂ ಬೆಂಗಳೂರಿನ ಇನ್ಸ್ಪ್ರೆಕ್ಟ್ ಸಂಸ್ಥೆ ಸಹಯೋಗದಲ್ಲಿ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಗಾರದಲ್ಲಿ ಕಾರ್ಮಿಕರಿಗೆ ಕಟ್ಟಡ ಕಟ್ಟುವ ಕಲೆ, ನೀರು ಸೋರದ ಹಾಗೆ ಕಟ್ಟುವ ತಂತ್ರಜ್ಞಾನ, ನೆಲಹಾಸಿನ ಬಗ್ಗೆ ತರಬೇತಿ ನೀಡಲಾಗುವುದು. ಈ ತರಬೇತಿ ಸಂಪೂರ್ಣವಾಗಿ ಉಚಿತವಾಗಿದ್ದು, ಹಾಜರಾಗುವ ಕಾರ್ಮಿಕರಿಗೆ ಪ್ರತಿದಿನ ೭೦೦ ರೂ. ದಿನಭತ್ಯೆ, ಊಟ ನೀಡಲಾಗುವುದು. ತರಬೇತಿ ಮುಗಿದ ಬಳಿಕ ಕಟ್ಟಡ ಕಟ್ಟಲು ಅಗತ್ಯವಿರುವ ತೂಗು ಗುಂಡು, ಕರಣೆ ಮತ್ತು ಪಾದರಸದ ಮಟ್ಟಗಳನ್ನು ಒಳಗೊಂಡ ಕಿಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತರಬೇತಿಗೆ ಬರಲು ಇಚ್ಚಿಸುವವರು ಮೊದಲೇ ಆಧಾರ್ ಕಾರ್ಡ್ ನೀಡಿ ಯಾವುದಾದರೂ ಓರ್ವ ಇಂಜಿನಿಯರ್ ಶಿಫಾರಸ್ಸಿನೊಂದಿಗೆ ದೂರವಾಣಿ ಸಂಖ್ಯೆ ೯೪೪೮೫೫೪೬೭೬ಗೆ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ಹೆಸರು ನೋಂದಾಯಿಸಿಕೊAಡ ೫೦ ಜನರಿಗೆ ಮಾತ್ರ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು. ಮಹಿಳಾ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಮೊದಲ ಹಂತದಲ್ಲಿ ಗಾರೆ ಕೆಲಸದವರಿಗೆ ತರಬೇತಿ ನೀಡಿದ ಬಳಿಕ, ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಮರಗೆಲಸ ಮಾಡುವವರಿಗೆ ತರಬೇತಿ ನೀಡಲು ಉz್ದÉÃಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.