ಜಿಲ್ಲೆ

ಕುವೆಂಪುನಗರ ಪಿಯು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಮೈಸೂರು: ಕುವೆಂಪುನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.


ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮ ಉದ್ಘಾಟಿಸಿದರು. 2022-23ನೇ ಸಾಲಿನಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆಗಸ್ಟ್‌ನಲ್ಲಿ ನಿವೃತ್ತರಾಗಲಿರುವ ಉಪನ್ಯಾಸಕರಾದ ನಾಗಭೂಷಣ ಆರಾಧ್ಯ, ಸುಂದರರಾಜ್ ಅವರನ್ನು ಸನ್ಮಾನಿಸಲಾಯಿತು.


ಪ್ರಾಂಶುಪಾಲ ಚಿದಾನಂದಕುಮಾರ್, ಪಾಲಿಕೆ ಸದಸ್ಯ ಎಂ.ಸಿ.ರಮೇಶ್, ಮೈಸೂರು ಟಾರ್ಪಾಲಿಸ್‌ನ ವೀರಭದ್ರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಷ್ಯಂ, ಉಪನ್ಯಾಸಕರಾದ ರವಿಕುಮಾರ್, ಕ್ಯಾತಮಾರನಹಳ್ಳಿ ಮಹೇಶ, ಮಹೇಶ್, ಶ್ರೀನಿವಾಸ್, ಪ್ರಸನ್ನ, ಮಧುಸೂದನ್, ಭಾರತಿ, ರೇಣುಕಮ್ಮ, ನೀತಾ ಉಪಸ್ಥಿತರಿದ್ದರು.