ಜಿಲ್ಲೆ

ಕುವೆಂಪು ಕೊಡುಗೆ ಚಿರಸ್ಮರಣೀಯ

ರಮೇಶ ಮೇಳಕುಂದಾ

ಕಲಬುರಗಿ: ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರ ಕವಿ ಕುವೆಂಪು ಯುಗಧರ್ಮ ವಾಣಿಯ ಮೂಲಕ ಚಿರಂಜೀವಿಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ ಎಂದು ಸಿದ್ದಪ್ಪ ಭಗವತಿ ಹೇಳಿದರು.

ನಗರದ ರಾಮ ಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟç ಕವಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ವರ ಕವಿ ಬೇಂದ್ರೆ ಹೇಳಿದಂತೆ ಕುವೆಂಪು ಅವರು ಯುಗದ ಜಗದ ಕವಿ ಎಂದು ಹೇಳಿದರು.

ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಪರಿಚಯ ಹಾಗೂ ಓದುವ ಆಸಕ್ತಿ ಕ್ಷೀಣಿಸುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಶಾಲೆಗಳು ಹಾಗೂ ಪೋಷಕರು ಮಕ್ಕಳಿಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿ ಬೆಳೆಸಬೇಕು ಎಂದರು.

ಕನ್ನಡ ವಿಭಾಗದ ಶಿP್ಷÀಕ ರಾಜು ರಾಠೋಡ ಮಾತನಾಡಿ, ಪುಟ್ಟಪ್ಪನವರು ಬಾಲ್ಯದಿಂದಲೇ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಕೃತಿಗಳ ಮೂಲಕ ಸಾಮಾಜಿಕ ಅನ್ಯಾಯ ಪ್ರತಿಭಟಿಸಿ, ಮನುಜ ಮತ ವಿಶ್ವ ಪಥ ಎಂಬುದನ್ನು ಸಾರಿದ್ದಾರೆ. ಕುವೆಂಪು, ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕ. ಅವರ ಸಾಹಿತ್ಯವನ್ನು ಪ್ರತಿ ವಿದ್ಯಾರ್ಥಿ ಓದಬೇಕು ಎಂದರು.

ಕುವೆAಪು ಕುರಿತು ವಿದ್ಯಾರ್ಥಿಗಳಾದ ಸಾಯಿಪ್ರಸಾದ, ವೈಭವ, ರೀತಿಕ್ ಹಾಗೂ ಸೌಮ್ಯ ಬಂದೇಶ ಮಾತನಾಡಿದರು. ಕುವೆಂಪು ಜೀವನಾಧಾರಿತ ಕಿರುಚಿತ್ರ ತೋರಿಸಲಾಯಿತು. ವಿದ್ಯಾರ್ಥಿನಿ ಲಕ್ಷಿö್ಮÃ ಕಲ್ಲಪ್ಪ ಸ್ವಾಗತಿಸಿದರು. ಮಹ್ಮದ್ ಆಫಾನ್ ವಂದಿಸಿದನು. ಸಿಂಚನಾ ರಾಘವೇಂದ್ರ ನಿರೂಪಣೆ ಮಾಡಿದರು. ಮುಖ್ಯ ಗುರು ಅಂಬಿಕಾ ರೆಡ್ಡಿ, ಶೈP್ಷÀಣಿಕ ಸಂಯೋಜಕಿ ಸುಮಾ ಭಗವತಿ, ರೇಣುಕಾ ಪಾಟೀಲ್ ಇತರರಿದ್ದರು.