ಜಿಲ್ಲೆ

ಕುಲಶಾಸ್ತ್ರ ಅಧ್ಯಯನಕ್ಕೆ ಸಹಕರಿಸಿ

ಚಿತ್ರದುರ್ಗ: ವಿಶ್ವಕರ್ಮ ಸಮಾಜಕ್ಕೆ ಸಂಬಂಧಿಸಿದ ಮಾಹಿತಿಗಳಿದ್ದಲ್ಲಿ ನಮಗೆ ತಲುಪಿಸುವ ಮೂಲಕ ಕುಲಶಾಸ್ತ್ರ ಅಧ್ಯಯನಕ್ಕೆ ಸಹಕರಿಸುವಂತೆ ಮೈ ಸೂರು ಮಾನಸ ಗಂಗೋತ್ರಿ ಅಧ್ಯಯನ ಕೇಂದ್ರದ ಸಂಶೋಧನ ಸಹಾಯಕ ಡಾ.ಮಹಾದೇವ್ ಸಮಾಜದವರಿಗೆ ಮನವಿ ಮಾಡಿದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ನಗರದ ಪತ್ರಿಕಾ ಭವನದಲ್ಲಿ ಶನಿ ವಾರ ಏರ್ಪಡಿಸಿದ್ದ ಕುಲಶಾಸ್ತ್ರ ಅಧ್ಯಯನ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ವಿಶ್ವಕರ್ಮ ಸಮಾಜದಲ್ಲಿ 141ಉಪಜಾತಿಗಳಿವೆ. ಬೆಂಗಳೂರಿನ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ,ವಿಶ್ವಕರ್ಮ ಹಾಗೂ ಅದರ ಉಪ ಜಾತಿಗಳ ಕುಲಶಾಸ್ತ್ರ ಅಧ್ಯಯನದ ಹೊ ಣೆಯನ್ನು ಮೈಸೂರು ವಿವಿಗೆ ವಹಿಸಿದೆ. ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡಪ್ಪ ಅವರ ನೇತೃತ್ವದಲ್ಲಿ ಆಧ್ಯಯನ ನಡೆಸಲಾಗುತ್ತಿದೆ.
ಸಮಿತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೇಟಿ ನೀಡಿ ಸಮಾಜದ ಆಚಾರ,ವಿಚಾರಗಳನ್ನು ಅಧ್ಯಯನ ಮಾಡಲಿದೆ. ಮೈಸೂರು,ಮಂಡ್ಯ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಸಮಾಜದ ಸಾಮಾಜಿಕ,ಆರ್ಥಿಕ,ರಾಜಕೀಯ,ಶೈಕ್ಷಣಿಕ,ಧಾರ್ಮಿಕ ಮೊದಲಾದ ವಿಷಯಗಳನ್ನು ತಿಳಿಯಲಾಗುತ್ತಿದ್ದು,ಪೂರಕ ಮಾಹಿತಿ,ದಾಖಲೆಗಳಿದ್ದರೆ ತಿಳಿಸುವಂತೆ(ದೂರವಾಣಿ ಸಂಖ್ಯೆ 63604 09568)ಮಹಾದೇವ್ ಕೋರಿದರು.
ಮಾನಸ ಗಂಗೋತ್ರಿ ಅಧ್ಯಯನ ಕೇಂದ್ರದ ಸಂಶೋಧನ ಸಹಾಯಕ ಡಾ,ಕೃಷ್ಣಮೂರ್ತಿ,ಅಖಿಲ ಭಾರತ ವಿಶ್ವಕರ್ಮ ಪರಿಷತ್ ಅಧ್ಯಕ್ಷ ಪ್ರಸನ್ನಕುಮಾರ್,ಪರಿಷತ್ ಜಿಲ್ಲಾಧ್ಯಕ್ಷ ಎಂ.ಶಂಕರಮೂರ್ತಿ,ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಶಂಕರಾಚಾರ್,ಇತಿಹಾಸ ಸಂಶೋಧಕ ಬಿ. ರಾಜಶೇಖರಪ್ಪ,ಸುರೇಶ್,ನನ್ನಿವಾಳದ ಶಿಲ್ಪಾಚಾರ್,ರವಿ,ಮೌನೇಶ್ವರಾಚಾರ್,ವಿಜಯಮ್ಮ,ಶಶಿಕಲಾ ಮತ್ತಿತರರು ಇದ್ದರು.