ಜಿಲ್ಲೆ

ಕುರ್ಕಿ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆಗಳು

ವಿಜಯವಾಣಿ ಸುದ್ದಿಜಾಲ

ಕೋಲಾರ
ತಾಲೂಕಿನ ನರಸಾಪುರ ವ್ಯಾಪ್ತಿಯ ಕುರ್ಕಿ ಗ್ರಾಮದ ಬೆಟ್ಟದಲ್ಲಿ ಚಿರತೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕ ಪಡುವಂತಾಗಿದೆ.
ನರಸಾಪುರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕುರ್ಕಿ ಗ್ರಾಮ ನರಸಾಪುರಕ್ಕೆ ಹೊಂದಿಕೊAಡAತಿದೆ. ಕುರ್ಕಿ ಬೆಟ್ಟದಲ್ಲಿ ಕೆಲವು ತಿಂಗಳುಗಳಿAದ ಚಿರತೆಗಳು ಇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದರು. ಆದರೆ ಶುಕ್ರವಾರ ಮುಂಜಾನೆ ಬೆಟ್ಟದ ಮೇಲಿನ ದೊಡ್ಡ ಬಂಡೆಯ ಮೇಲೆ ೩ ಜಿರತೆಗಳ ಗುಂಪೊAದು ಕಂಡುಬAದಿದೆ.
ಈಗಾಗಲೇ ಗ್ರಾಮಸ್ಥರು, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಳಿಗಾಗಿ ಊರಿನ ಬಳಿ ಬೋನ್ ವ್ಯವಸ್ಥೆ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಕುರ್ಕಿ ಗ್ರಾಮದ ಅನೇಕ ರೈತರ ಹೊಲ ತೋಟಗಳು ಬೆಟ್ಟದ ತಪ್ಪಲಿನಲ್ಲಿದ್ದು,
ಚಿರತೆಗಳಿಗೆ ಹೆದರಿ ಜನ ಅವುಗಳನ್ನು ಹಾಗೆಯೇ ಬೆಳೆ ಬೆಳೆಯದೆ ಬೀಡು ಬಿಡುವಂತಾಗಿದೆ. ಇದರಿಂದ ರೈತರಿಗೆ ಸಾವಿರಾರು ರೂಪಾಯಿಗಳು ನಷ್ಟವಾಗುತ್ತಿದೆ. ಚಿರತೆಗಳು ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ಬಂದು ಈಗಾಗಲೇ ಹಲವು
ಬಾರಿ ಕೋಳಿ ಹುಂಜ ಹಾಗೂ ಕುರಿ, ಮೇಕೆ ಈಗೆ ಅನೇಕ ಪ್ರಾಣಿಗಳನ್ನು ಎಳೆದೊಯ್ದಿದೆ.
ಕುರ್ಕಿ ಗ್ರಾಮ ಬೆಟ್ಟಕ್ಕೆ ಸಮೀಪ ಇದ್ದು, ರಾತ್ರಿ ವೇಳೆ ಚಿರತೆಗಳಿಂದ ಗ್ರಾಮಸ್ಥರಿಗೆ ತೊಂದರೆ ಕಟ್ಟಿಟ್ಟ ಬುಟ್ಟಿ ಎಂಬAತಾಗಿದೆ. ಜನರು ಹಗಲು-ರಾತ್ರಿ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಬೇರೆ ಏನಾದರು ಪರ್ಯಾಯ ವ್ಯವಸ್ಥೆ ಮಾಡಬೇಕು, ಸರಿಯಾದ ಸ್ಥಳದಲ್ಲಿ ಬೋನು ವ್ಯವಸ್ಥೆ ಮಾಡಬೇಕು. ಜತೆಗೆ ಚಿರತೆಗಳನ್ನು ಬೇರೆಡೆ ಬಿಡುವ ಕಾರ್ಯವನ್ನು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.