ಕಲಬುರಗಿ: ಮೇಳಕುಂದಾ ಬಿ ಗ್ರಾಮದಲ್ಲಿ ಮಾಳಿಂಗರಾಯ ದೇವಸ್ಥಾನದ ಪೂಜಾರಿಕೆ ಕುರುಬ ಸಮಾಜಕ್ಕೆ ನೀಡಬೇಕು ಎಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಆಗ್ರಹಿಸಿದರು.
ಮೇಳಕುಂದಾ ಗ್ರಾಮದಲ್ಲಿ ಸಂಪ್ರದಾಯ ಬದ್ಧವಾಗಿ ಕುರುಬ ಸಮಾಜದ ಪೂಜಾರಿಗಳು ಮಾಳಿಂಗರಾಯ ದೇವಸ್ಥಾನ ಎಂದು ಪೂಜೆ ಮಾಡಿಕೊಂಡು ಬಂದಿದ್ದಾರೆ. ಆದರೆ ೨೦೧೬ರಲ್ಲಿ ಕೆಲ ಅನ್ಯ ಜಾತಿಯ ವ್ಯಕ್ತಿಗಳು ದಬ್ಬಾಳಿಕೆ ಮಾಡಿ, ಸಿz್ದೆÃಶ್ವರ ದೇವಸ್ಥಾನವಿದೆ ಎಂದು ಹೇಳಿ ಕುರುಬ ಸಮಾಜದವರನ್ನು ದೇವಸ್ಥಾನದಿಂದ ಹೊರ ಹಾಕಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗ್ರಾಮದ ಸರ್ವೇ ೧೧೪ರಲ್ಲಿ ೨೯ ಎಕರೆ ೩೪ ಗುಂಟೆ ಇನಾಮ ಭೂಮಿ ಇದ್ದು, ಪಹಣಿ ಹಾಗೂ ಕಬ್ಜೆ ಕುರುಬರ ಹೆಸರಿನಲ್ಲಿದೆ. ಇದೇ ಸರ್ವೇ ನಂಬರಿನಲ್ಲಿ ಮಾಳಿಂಗರಾಯ ದೇವಸ್ಥಾನವಿದೆ. ಪತ್ರಿಕೆ ೧೩೨೦ ಪಸಲಿಯಲ್ಲಿ ದೇವರ ಹೆಸರು ಮಾಳದೇವ ಮಾಲಿಕ ಮುತ್ತಪ್ಪ ಧನಗರ ಎಂದು ಇದೆ. ನಮೂನೆ ೯ರಲ್ಲಿ ಮಾಳಿಂಗರಾಯ ದೇವಸ್ಥಾನವಿದೆ. ಇದರ ಪೂಜಾರಿ ರೇವೂ ಪೂಜಾರಿ ಎಂದು ಇದೆ. ಮುಜರಾಯಿ ಇಲಾಖೆಯ ರಾಜ್ಯಪತ್ರದಲ್ಲಿ ಮಾಳಿಂಗರಾಯ ದೇವಸ್ಥಾನವೆಂದು ಇದೆ. ಕರ್ನಾಟಕ ಸರ್ಕಾರ ಮಾಳಿಂಗರಾಯ ದೇವಸ್ಥಾನಕ್ಕೆ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.
೨೦೧೭ರಲ್ಲಿ ಕಲಬುರಗಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸಮೀಕ್ಷೆ ನಡೆಸಿ, ಗ್ರಾಮದ ಸರ್ವೇ ೬೭ರಲ್ಲಿ ಸಿz್ದÉÃಶ್ವರ ದೇವಸ್ಥಾನವಿದೆ ಎಂದು ವರದಿ ಸಲ್ಲಿಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಅನುಸೂಚಿತ ಪಟ್ಟಿಯಲ್ಲಿ ಸಿz್ದÉÃಶ್ವರ ದೇವಸ್ಥಾನವಿಲ್ಲ. ಮಾಳಿಂಗರಾಯ ದೇವಸ್ಥಾನವಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಲುಮತದವರೇ ಪೂಜೆ, ಸಂಪ್ರದಾಯ ಮಾಡುತ್ತ ಬಂದಿದ್ದು, ೨೦೧೬ರಲ್ಲಿ ಸಿವಿಲ್ ಕೇಸ್ ಹಾಕಿ ಕೀಲಿ ಕಸಿದುಕೊಂಡು, ಬೋರ್ಡ್ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.
ಸಿವಿಲ್ ಕೇಸ್ ಪೆಂಡಿAಗ್ ಇರುವಾಗ ಕ್ರಿಮಿನಲ್ ಆದೇಶಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಜಿಲ್ಲಾ ಕೋರ್ಟð, ಹೈಕೋರ್ಟ್, ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೂ ತಹಸೀಲ್ದಾರ್ ಏಕಪಕ್ಷೀಯ ನಿರ್ಣಯಕೈಗೊಂಡು ದೇವಸ್ಥಾನವನ್ನು ಸಿz್ದÉÃಶ್ವರ ಕಮಿಟಿಯವರಿಗೆ ಹಸ್ತಾಂತರಿಸಿದ್ದಾರೆ. ಇದನ್ನು ಕುರುಬ ಸಮಾಜದವರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿ ಜ.೩೦ರಂದು ಬೆಳಗ್ಗೆ ೧೦ಕ್ಕೆ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಸೈಬಣ್ಣ ಮಲ್ಲಾಬಾದಿ, ನಾಗೀಂದ್ರಪ್ಪ ಪೂಜಾರಿ, ಮಹಾದೇವಪ್ಪ ಮುತ್ಯಾ ಒಡೆಯರ್, ರಮೇಶ ಕನಗೊಂಡ, ಶಿವಲಿಂಗಪ್ಪ ವಗ್ಗಿ, ರವಿಗೊಂಡ ಕಟ್ಟಿಮನಿ, ಪ್ರಭುದೇವ ಯಳಸಂಗಿ ಇತರರಿದ್ದರು.