ಜಿಲ್ಲೆ

ಕುರುಬನಕಟ್ಟೆ ಕಂಡಾಯಗಳ ಉತ್ಸವ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜೀಪುರ ಗ್ರಾಮದ ಆದಿಜಾಂಬವ ಜನಾಂಗದ ವತಿಯಿಂದ ಮೊದಲನೆ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಕುರುಬನಕಟ್ಟೆ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಬೆಳಗ್ಗೆ ಬಡಾವಣೆಯೊಳಗೆ ಕಂಡಾಯಗಳನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಪ್ರತಿ ಮನೆಯಿಂದ ಭಕ್ತರು ಹಣ್ಣು, ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ನೆರೆದಿದ್ದ ಜನರಿಗೆ ಅನ್ನ ಸಂತರ್ಪಣೆ ಮಾಡಿದರು. ಮೆರವಣಿಗೆ ವೇಳೆ ಯುವಕರು ಹಾಗೂ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಈ ಮೆರವಣಿಗೆಯಲ್ಲಿ ತಿಮ್ಮರಾಜೀಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆಂಪರಾಜು, ಸದಸ್ಯ ಬಿ.ಕುಮಾರ್, ಯಜಮಾನರಾದ ಸುರೇಶ್, ಬಸವರಾಜು, ಸಿದ್ದಯ್ಯ, ರಾಚಪ್ಪ, ಶಂಕರ್ ಇತರರು ಇದ್ದರು.