ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬೆಳಗಾವಿ ಜಿಲ್ಲಾಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. ವಿವೇಕರಾವ ಪಾಟೀಲ, ಡಾ.ರಾಜೇಂದ್ರ ಯ ಸಣ್ಣಕ್ಕಿ, ಲಕ್ಷ್ಮಣರಾವ್ ಚಿಂಗಳೆ, ಬಸವರಾಜ ಬಸಳಿಗುಂದಿ, ಶಂಕರರಾವ್ ಹೆಗಡೆ, ಅಶೋಕ ಮೆಟಗುಡ್ಡ, ವಿನಾಯಕ ಬನಹಟ್ಟಿ, ಎಸ್.ಎ್.ಪೂಜೇರಿ ಇತರರಿದ್ದರು. 
ಜಿಲ್ಲೆ

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಲು ಒತ್ತಾಯ

ಬೆಳಗಾವಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಕಾರಿಗಳು ಜಿಲ್ಲಾಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.

ರಾಜ್ಯದಲ್ಲಿ 80 ಲಕ್ಷಕ್ಕೂ ಅಕ ಕುರುಬರ ಜನಸಂಖ್ಯೆ ಇದೆ. ನಮ್ಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದೆ. ನಮಗೆ ಈಗಾಗಲೇ ಹಿಂದುಳಿದ ವರ್ಗ ‘2ಎ’ ಮೀಸಲಾತಿ ಇದೆ. ಈ ವರ್ಗದಲ್ಲಿ ನೂರಾರು ಜಾತಿಗಳಿವೆ. ಪಂಚಮಸಾಲಿ, ಲಿಂಗಾಯತ ಸಮಾಜದವರನ್ನು ಹೊರತುಪಡಿಸಿ ಉಳಿದ ಎಲ್ಲ ಲಿಂಗಾಯತ ಉಪ ಪಂಗಡಗಳು 2ಎ ಮೀಸಲಾತಿಯಲ್ಲಿವೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಕುರುಬ ಸಮುದಾಯ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಈಗಾಗಲೇ ಕಾಗಿನೆಲೆ ಜಗದ್ಗುರು ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರುವರೆಗೆ ರಾಜ್ಯದ 6 ಕಡೆಗಳಲ್ಲಿ ವಿಭಾಗ ಮಟ್ಟದ ಸಮ್ಮೇಳನ ಹಾಗೂ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಮಾಡಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿಗಾಗಿ ಸರ್ಕಾರದ ಗಮನ ಸೆಳೆಯಲಾಗಿದೆ. ಈಗ ಸರ್ಕಾರ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಕುಲಶಾಸೀಯ ಅಧ್ಯಯನ ಮಾಡಲು ನೇಮಕ ಮಾಡಲಾಗಿತ್ತು. ಈಗಾಗಲೇ ಈ ವರದಿಯು ಸಿದ್ಧವಾಗಿದ್ದು, ಅದನ್ನು ಮುಖ್ಯಮಂತ್ರಿ ಅವರು ತರಿಸಿಕೊಂಡು ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬೇಕು ಎಂದು ಒತ್ತಾಯಿಸಿದರು. ನಮ್ಮ ಸಮಾಜದ ಉಪ ಪಂಗಡವಾದ ಗೊಂಡ, ಸಮಾಜಕ್ಕೆ ಎಸ್‌ಟಿ ಮೀಸಲಾತಿ ಇದೆ. ಅದನ್ನು ಕುರುಬ ಸಮುದಾಯದ ಎಲ್ಲ ಪಂಗಡಗಳಿಗೆ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ವಿವೇಕರಾವ ಪಾಟೀಲ, ಡಾ.ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣರಾವ್ ಚಿಂಗಳೆ, ಬಸವರಾಜ ಬಸಳಿಗುಂದಿ, ಶಂಕರರಾವ್ ಹೆಗಡೆ, ಅಶೋಕ ಮೆಟಗುಡ್ಡ, ವಿನಾಯಕ ಬನಹಟ್ಟಿ, ಎಸ್.ಎ್.ಪೂಜೇರಿ, ಡಿ.ಡಿ.ಟೊಪೋಜಿ, ಬಾಬುರಾವ ಪಾಪಮೋಡೆ, ಎಚ್.ಎಸ್. ನಸಲಾಪುರ, ಭಗವಂತ ಬಂತಿ, ಜಿ.ಜಿ. ಕಣವಿ ಇತರರಿದ್ದರು.