ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ ಆಡಳಿತ ಮಂಡಳಿ ಸಿಎಸ್‌ಆರ್ ಚರ್ಮೇನ್ ರಾಜು ರೇವಣಕರ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಚಕ್ ಹಸ್ತಾಂತರಿಸಿದರು.  
ಜಿಲ್ಲೆ

ಕುಮಾರೇಶ್ವರ ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನಾ ಪ್ಲ್ಯಾಂಟ್ ದೇಣಿಗೆ

ಬಾಗಲಕೋಟೆ: ಆಯಿಲ್ ಇಂಡಿಯಾ ಲಿಮಿಟೆಡ್ ಆಡಳಿತ ಮಂಡಳಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿ (ಸಿಎಸ್‌ಆರ್) ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನಾ ಪ್ಲ್ಯಾಂಟ್ ದೇಣಿಗೆಯಾಗಿ ನೀಡಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕೋಟಿ ಹೈದಿನೈದು ಲಕ್ಷ ರೂ. ಮೌಲ್ಯದ ಈ ಘಟಕವು ಪ್ರತಿ ನಿಮೀಷಕ್ಕೆ ಸಾವಿರ ಲೀಟರ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕವು ಜಿಯೋಲೈಟ ಟೆಕ್ನಾಲಜಿಯಿಂದ ಜರ್ಮನ್ ತಂತ್ರಜ್ಞಾನದ ಸ್ಕೊç ಕಾಂಪ್ರೆಸ್ಸರ್ ಸಹಾಯದಿಂದ ಗಾಳಿಯಲ್ಲಿ ಗುಂಡು ಹೀರಿಕೊಂಡು ಆ ಗಾಳಿಯಿಂದ ಅನಿಲ ರೂಪದ ಶುದ್ಧೀಕರಿಸಿದ ಆಮ್ಲಜನಕ ಉತ್ಪಾದಿಸುತ್ತದೆ ಎಂದರು.

ಗಾಳಿಯಿಂದ ಉತ್ಪಾದಿಸಿದ ಆಮ್ಲಜನಕವು ಪ್ರತಿಶತ ೯೩ ರಿಂದ ೯೫ ರಷ್ಟು ಶುದ್ಧವಾಗಿದ್ದು,ಅದನ್ನು ಮೆಡಿಕಲ್ ಗ್ರೇಡ್ ಆಕ್ಸಿಜನ (ಮೆಡಿಕಲ್ ಗ್ರೇಡ್ ಆಕ್ಸಿಜನ್) ರೋಗಿಗಳಿಗೆ ನೀಡಲು ಯೋಗ್ಯವಾಗಿರುತ್ತದೆ. ಉತ್ಪಾದಿಸಿದ ಆಮ್ಲಜನಕ ೭೫೦೦ ಲೀಟರ್ ಸಾಮರ್ಥ್ಯದ ಟ್ಯಾಂಕನಲ್ಲಿ ಸಂಗ್ರಹಿಸಲಾಡಗುವುದು, ಟ್ಯಾಂಕನಲ್ಲಿ ಸಂಗ್ರಹಗೊAಡ ಆಮ್ಲಜನಕ ಕುಮಾರೇಶ್ವರ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಇಂತಹ ಅತ್ಯಂತ ಆಧುನಿಕ ತಂತ್ರಜ್ಞಾನ ವಿಧಾನವಾಗಿದ್ದು, ಆಸ್ಪತ್ರೆಗೆ ಅಗತ್ಯವಾದ ಪ್ರಮಾಣದಷ್ಟು ಆಮ್ಲಜನಕ ಪೂರೈಸಲು ಸಾಧ್ಯವಾಗುತ್ತದೆ. ಈ ಆಕ್ಸಿಜನ ಉತ್ಪದನಾ ಪ್ಲ್ಯಾಂಟ್ ದೇಣಿಗೆಯಾಗಿ ನೀಡಿರುವ ಆಯಿಲ್ ಇಂಡಿಯಾ ಲಿಮಿಟೆಡ್‌ನ ಆಡಳಿತ ಮಂಡಳಿ ಅವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.

ಆಯಿಲ್ ಇಂಡಿಯಾ ಲಿಮಿಟೆಡ್ ಆಡಳಿತ ಮಂಡಳಿ ಸಿಎಸ್‌ಆರ್ ಚರ್ಮೇನ್ ರಾಜು ರೇವಣಕರ ಮಾತನಾಡಿ, ಕಳೆದ ಅವಽಗೆ ಕೇಂದ್ರ ಸರ್ಕಾರ ಹಾಗೂ ಪಕ್ಷವು ಸೇವೆ ಸಲ್ಲಿಸಲು ಅವಕಾಶ ನೀಡಿತು. ಅದರಂತೆ ನಮ್ಮ ಊರಿಗೆ ಸಣ್ಣ ಸೇವೆ ಸಲ್ಲಿಸಿದ್ದೇನೆ. ಎರಡನೇ ಅವಽಗೆ ಅವಕಾಶ ಸಿಕ್ಕಿದ್ದು, ಸಿಎಸ್‌ಆರ್ ಚರ್ಮೇನ್ ಆಗಿ ನಿಯುಕ್ತಿಗೊಳಿಸಿದ್ದಾರೆ. ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಸ್‌ಆರ್ -Àಂಡ ಬಳಕೆ ಮಾಡಲು ಆಲೋಚನೆ ಇದೆ. ಈಗಾಗಲೇ ಕೇದಾರದಲ್ಲಿ ಯಾತ್ರಿ ನಿವಾಸ, ಬಡ ಮಕ್ಕಳಿಗಾಗಿ ವಸತಿ ನಿಲಯ ನಿರ್ಮಾಣಕ್ಕೆ ಕೋಟ್ಯಂತರ ಹಣ ನೀಡಲಾಗಿದೆ ಎಂದು ಹೇಳಿದರು.