ಬಾಗಲಕೋಟೆ: ನಗರದ ಬಿವಿವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ಪಂಜಾಬ ನ್ಯಾಷನಲ್ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಅಂದಾಜು ೧೨ ಲಕ್ಷ ರೂ.ಮೌಲ್ಯದ ಮ್ಯಾಕ್ವೇಟ್ ಸರ್ವೋ ಇನ್‌ಫಂಟ್ ಕೃತಕ ಉಸಿರಾಟ ಯಂತ್ರವನ್ನು (ವೆಂಟಿಲೇಟರ್) ದೇಣಿಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಜರ್ಮನ್ ದೇಶದ ಅತ್ಯಾಧುನಿಕ ತಂತ್ರಜ್ಞಾನದಿAದ ತಯಾರಿಸಲ್ಪಟ್ಟ ಈ ಕೃತಕ ಉಸಿರಾಟ ಯಂತ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ತೊಂದರೆಯಲ್ಲಿ ಆಕ್ಸಿಜನ್ ಪೂರೈಕೆಗಾಗಿ ಬಳಕೆಯಾಗುತ್ತದೆ. ಎರಡನೇ ಬಾರಿಗೆ ಆಕ್ಸಿಜನ್ ಯಂತ್ರ ನೀಡಿದೆ. ಪಂಜಾಬ ನ್ಯಾಷನಲ್ ಬ್ಯಾಂಕ್ ವೆಂಟಿಲೇಟರ್ ಯಂತ್ರ ನೀಡುವುದರ ಮೂಲಕ ತನ್ನ ಸಾಮಾಜಿಕ ಕಾಳಜಿಯನ್ನು ಪುನಃ ವ್ಯಕ್ತಪಡಿಸಿದೆ. ಬ್ಯಾಂಕಿನ ಈ ನೆರವಿನ ಹಸ್ತ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ನೆರವು ಅವರ ಸಾಮಾಜಿಕ ಕಾಳಜಿಗೊಂದು ದೃಷ್ಟಾಂತ. ಬ್ಯಾಂಕ್‌ನವರು ನೀಡಿದ ಈ ಉಪಕರಣ ಸಾರ್ವಜನಿಕರ ಆರೋಗ್ಯ ಸೇವೆಗೆ ಸದುಪಯೋಗವಾಗಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ಬಿವಿವಿ ಸಂಘದ ಕೇಂದ್ರ ಕಚೇರಿಯ ಹಣಕಾಸು ಅಽಕಾರಿ ಅನಂತ ಓಂಕಾರ, ಪಂಜಾಬ ನ್ಯಾಷನಲ್ ಬ್ಯಾಂಕ್‌ನ ಹುಬ್ಬಳ್ಳಿ ವಿಭಾಗೀಯ ಮುಖ್ಯಸ್ಥ ರಾಕೇಶ ಕುಮಾರ, ಬಾಗಲಕೋಟೆ ಶಾಖಾ ವ್ಯವಸ್ಥಾಪಕ ಗೂಳಪ್ಪ ಯೋಗಪ್ಪನವರಮ, ವಿದ್ಯಾಗಿರಿ ಶಾಖೆಯ ವ್ಯವಸ್ಥಾಪಕ ಗಂಗಾಧರ ಪಿ. ಇದ್ದರು.