ತಿ.ನರಸೀಪುರ ಪಟ್ಟಣದಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್ ಅವರ ಸಮ್ಮುಖದಲ್ಲಿ ಮುಸ್ಲಿಂ ಮುಖಂಡರು ಜೆಡಿಎಸ್ ಸೇರ್ಪಡೆಯಾದರು. ಸಿ.ಬಿ.ಹುಂಡಿ ಚಿನ್ನಸ್ವಾಮಿ, ಪಕ್ಷದ ಮುಖಂಡರಾದ ಶಂಭುದೇವನಪುರ ರಮೇಶ್, ವಿಪಿ ಹುಂಡಿ ಸಂತೋಷ್ ಕುಮಾರ್, ಗೋಪಿ, ಬೋರೇಗೌಡ, ಕಟ್ಟೇಪುರ ಸಿದ್ದಪ್ಪ, ಬಾಳೆಎಲೆ ಕುಮಾರ್, ಅಂದಾನಿಗೌಡ, ಮಾವಿನಹಳ್ಳಿ ರಾಜೇಶ್, ಸೋಸಲೆ ರಾಜೇಶ್ ಇದ್ದರು. 
ಜಿಲ್ಲೆ

ಕುಮಾರಸ್ವಾಮಿ ಸಿಎಂ ಆಗಲು ಸಹಕಾರ ನೀಡಿ

ತಿ.ನರಸೀಪುರ: ಜೆಡಿಎಸ್‌ನ ತತ್ವ-ಸಿದ್ಧಾಂತಗಳನ್ನು ನಂಬಿ ಪಕ್ಷ ಸೇರ್ಪಡೆಗೊಂಡಿರುವ ಮುಸ್ಲಿಂ ಸಮುದಾಯದ ಮುಖಂಡರ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು.

ಪಟ್ಟಣದ ಮಸ್ಲಿಂ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪಕ್ಷ ಸೇರಿದ ಮುಸ್ಲಿಂ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸವಿಟ್ಟು ಮುಸ್ಲಿಂ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಸ್ಲಿಮರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈಗ ಸಿ.ಎಂ.ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದರು.

ಮೈಸೂರು ಭಾಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ಸೇರಿದಂತೆ ಮತ್ತಿತರೆ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಟಿ ್ಟದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಸಮುದಾಯದವರು ಬೆಂಬಲಿಸಿದ್ದಲ್ಲಿ ಕುಮಾರಸ್ವಾಮಿ ಉತ್ತಮ ಯೋಜನೆ ಹಾಕಿಕೊಂಡಿದ್ದಾರೆ. ಹಾಗಾಗಿ ಎಚ್‌ಡಿಕೆ ಮುಖ್ಯಮಂತ್ರಿಯಾಗಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೂ ಮೊದಲು ಶಾಸಕರು ಪಟ್ಟಣದ ಪೇಟೇಗೇರಿ, ಚಿಕ್ಕ ಅಂಗಡಿ ಬೀದಿ, ಕೆನರಾ ಬ್ಯಾಂಕ್ ಹಾಗೂ ಕಡ್ಲೆ ರಂಗಮ್ಮನ ಬೀದಿಯಲ್ಲಿ ಪಾದಯಾತ್ರೆ ಮಾಡಿ ಮತಯಾಚಿಸಿದರು. ಮುಸ್ಲಿಂ ಬಡಾವಣೆಗೆ ಬೈಕ್‌ನಲ್ಲಿ ಬಂದ ಶಾಸಕರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಲಾಯಿತು.

ಮುಸ್ಲಿಂ ಯುವ ಮುಖಂಡರಾದ ಅಸ್ಗರ್ ರಝಾ, ಕೌಸರ್ ರಝಾ, ಕೈಸರ್ ರಜಾ,ಸಿಕಂದರ್ ಪಾಷ, ಜಾಫರ್ ಸಾದಿಕ್, ಅಬ್ದುಲ್ ರೆಹಮಾನ್, ನಸೀರ್ ಅಹ್ಮದ್, ಅಸ್ಲಂಪಾಷ, ಆಲಂ ಷರೀಫ್, ಕುರ‌್ರಂಷರೀಫ್, ಮಹ್ಮದ್ ಅನೀಫ್, ಸದ್ದಾಂ ಹುಸೇನ್, ಮಹಮ್ಮದ್ ಸಮೀವುಲ್ಲಾ, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಪಕ್ಷದ ಮುಖಂಡರಾದ ಶಂಭುದೇವನಪುರ ರಮೇಶ್, ವಿಪಿ ಹುಂಡಿ ಸಂತೋಷ್ ಕುಮಾರ್, ಗೋಪಿ, ಬೋರೇಗೌಡ, ಕಟ್ಟೇಪುರ ಸಿದ್ದಪ್ಪ, ಬಾಳೆಎಲೆ ಕುಮಾರ್, ಅಂದಾನಿಗೌಡ, ಮಾವಿನಹಳ್ಳಿ ರಾಜೇಶ್, ಸೋಸಲೆ ರಾಜೇಶ್ ಇದ್ದರು.