ಯಕ್ಷಗಾನ ವೇಷಧಾರಿಯಾಗಿ ಚಿತ್ರನಟ ರಮೇಶ್ ಅರವಿಂದ್ 
ಜಿಲ್ಲೆ

ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದಿಂದ ಆ.26ರಂದು ಯಕ್ಷಗಾನ ಸಂಜೆ

ಆರ್.ಕೃಷ್ಣ

ಮೈಸೂರು: ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರ, ನಗರದ ಭಕ್ತಿಗೌರವ ಗೀತಾ ಕೇಂದ್ರದ ವತಿಯಿಂದ ಆ.26ರಂದು ಕಲಾಮಂದಿರದಲ್ಲಿ ಯಕ್ಷಗಾನ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಭಕ್ತಿಗೌರವ ಗೀತಾ ಕೇಂದ್ರದ ಬಲರಾಂ ದಾಸ್ ತಿಳಿಸಿದರು.
26ರಂದು ಸಂಜೆ 5.30ರಿಂದ ಕಾರ್ಯಕ್ರಮ ನಡೆಯಲಿದ್ದು, ಮಹಾಭಾರತದಲ್ಲಿನ ಒಂದು ಪ್ರಮುಖ ಅಧ್ಯಾಯವಾದ ‘ಶ್ರೀಕೃಷ್ಣ ಸಂಧಾನ’ ಕಥಾನಕವನ್ನು ಯಕ್ಷಗಾನ ಆಧರಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾಗವತದಲ್ಲಿ ಕೊಳಗಿ ಕೇಶವ ಹೆಗಡೆ, ಮದ್ದಳೆ ಯಲ್ಲಾಪುರದ ಶಂಕರ ಭಾಗವತ, ಚಂಡೆ ಸಂತೂರು ಗಜಾನನ ಹೆಗಡೆ, ಶ್ರೀಕೃಷ್ಣ ವೇಷದಲ್ಲಿ ಕಲಗದ್ದೆ ವಿನಾಯಕ ಹೆಗಡೆ , ಕೌರವ ಪಾತ್ರದಲ್ಲಿ ಕುಮುಟಾ ಡಾ.ಜಿ.ಎಲ್.ಹೆಗಡೆ, ವಿದುರ ಪಾತ್ರದಲ್ಲಿ ಮೈಸೂರಿನ ದಿವಾಕರ ಹೆಗಡೆ, ಕರ್ಣ ಪಾತ್ರದಲ್ಲಿ ವೆಂಕಟೇಶ ಬಗ್ರಿಮಕ್ಕಿ ಇರಲಿದ್ದಾರೆ ಎಂದು ಹೇಳಿದರು.
ಆಯೋಜಕರಾದ ಗೌರಶೆಟ್ಟಿದಾಸ್, ಮದನ್ ತೋಟ, ವಿಶ್ವಾಸ್ ಪ್ರಭು ಇದ್ದರು.