ಜಿಲ್ಲೆ

ಕುಮಟಾಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಶಿರಸಿಗೆ ಪರಿಸರ ವಿಶ್ವ ವಿದ್ಯಾಲಯ

ವಿಜಯವಾಣಿ ಸುದ್ದಿಜಾಲ ಕಾರವಾರ
ಇತ್ತೀಚೆಗೆ ಶಿರಸಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬೊಮ್ಮಾಯಿ ಮಾಡಿದ್ದ ಎರಡು ಘೋಷಣೆಗಳನ್ನು ಬಜೆಟ್‌ನಲ್ಲಿ ಅಽಕೃತಗೊಳಿಸಿದ್ದಾರೆ. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನಿರ್ಮಾಣ ಮಾಡಲಾಗುವುದು. ಶಿರಸಿಯಲ್ಲಿ ಪರಿಸರ ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಅಲ್ಲದೆ ಜಿಲ್ಲೆಗೆ ಇನ್ನೂ ಕೆಲವು ಕೊಡುಗೆಗಳನ್ನು ನೀಡಿದ್ದಾರೆ.
ಚೆನ್ನಭೈರಾದೇವಿ ಥೀಮ್ ಪಾರ್ಕ್:
ಕಾಳು ಮೆಣಸಿನ ರಾಣಿ ಎಂದೇ ಪ್ರಸಿದ್ಧವಾಗಿರುವ ಚೆನ್ನಭೈರಾದೇವಿ ಹೆಸರಿನಲ್ಲಿ ಹೊನ್ನಾವರದಲ್ಲಿ ತೀಮ್ ಪಾರ್ಕ್ ಪ್ರಾರಂಭಿಸಲು ಈಗಾಗಲೇ ಧರ್ಮಸ್ಥಳದ ಧರ್ಮಾಽಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಯೋಜನೆ ರೂಪಿಸಿದೆ. ಬಜೆಟ್‌ನಲ್ಲಿ ಅದಕ್ಕೆ ಅನುದಾನ ಘೋಷಿಸಲಾಗಿದೆ.
ಪುನರುಚ್ಛಾರ:
ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಕಳೆದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಜಾರಿಯ ಬಗ್ಗೆ ಸಿಎಂ ಪುನರುಚ್ಛಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಲ್ಲಿ ಕೇಣಿಯಲ್ಲಿ 30 ಎಂಟಿಪಿಎ ಸಾಮರ್ಥ್ಯದ ಗ್ರೀನ್ ಫೀಲ್ಡ್ ಬಂದರು. ಪಾವಿನಕುರ್ವಾದಲ್ಲಿ 14 ಎಂಟಿಪಿಎ ಸಾಮರ್ಥ್ಯದ ಬಂದರು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುವುದು. ಮಾಜಾಳಿಯಲ್ಲಿ ಮತ್ಸ÷್ಯ ಸಂಪದ ಯೋಜನೆಯಲ್ಲಿ 250 ಕೋಟಿ ರೂ.ದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ವಿಸ್ತçತ ಯೋಜನಾ ವರದಿ ಸಿದ್ಧಪಡಿಸಿ ಕಳಿಸಲಾಗಿದೆ ಎಂದಿದ್ದಾರೆ. ಕಾರವಾರ ಇಂಜಿನಿಯರಿAಗ್ ಕಾಲೇಜ್‌ನ್ನು ಕೆಐಟಿಯಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಕಾರವಾರ ಸರ್ಕಾರಿ ಕಾಲೇಜ್ ಪಕ್ಕ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಈ ವರ್ಷ ಮುಗಿಸಲಾಗುತ್ತದೆ. ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಈಗಾಗಲೇ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮೀನುಗಾರರಿಗೆ ಹಲವು ಯೋಜನೆ:
ಮೀನುಗಾರರಿಗಾಗಿ ಸಿಎಂ ಹಲವು ಯೋಜನೆ ಘೋಷಿಸಿದ್ದಾರೆ. ಅವುಗಳಿಂದ ಜಿಲ್ಲೆಗೂ ಅನುಕೂಲವಾಗಲಿದೆ. ಮುಖ್ಯವಾಗಿ ಸೀಮೆ ಎಣ್ಣೆಯ ಚಾಲಿತ ನಾಡ ದೋಣಿಗಳಿಗೆ ಪೆಟ್ರೋಲ್, ಡೀಸೆಲ್ ಇಂಜಿನ್ ಬಳಸಲು ಕ್ರಮ ವಹಿಸಲಾಗುವುದು. ಇಂಜಿನ್ ಖರೀದಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಮುಂದಿನ ಎರಡು ವರ್ಷದವರೆಗೆ ಡಿಬಿಟಿ ಯೋಜನೆಯಲ್ಲಿ ಮೀನುಗಾರರ ಖಾತೆಗಳಿಗೆ ನೇರವಾಗಿ ಸೀಮೆ ಎಣ್ಣೆ ಸಹಾಯಧನ ಹಸ್ತಾಂತರಿಸಲಾಗುವುದು ಎಂದಿದ್ದಾರೆ.
ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ನೀಡುತ್ತಿರುವ ಡೀಸೆಲ್ ಸಬ್ಸಿಡಿ ಮಿತಿಯನ್ನು 1.5 ಲಕ್ಷ ಕೆಎಲ್‌ನಿಂದ 2 ಲಕ್ಷ ಕೆ.ಎಲ್.ಗೆ ಹೆಚ್ಚಿಸಲಾಗಿದೆ. ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ನೆರವಾಗಲು ಆರ್ಟಿಫಿಷಿಯಲ್ ರೀಪ್(ಕೃತಕ ಬಂಡೆಗಳು)ನಿರ್ಮಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಭಿವೃದ್ಧಿಪಡಿಸಿದ ಜಿಪಿಎಸ್ ಆಧಾರಿತ ಸಂವಹನಾ ವ್ಯವಸ್ಥೆಯನ್ನು 17 ಕೋಟಿ ವೆಚ್ಚದಲ್ಲಿ ಅಳವಡಿಸಲಾಗುವುದು. ಮೀನುಗಾರರಿಗೆ 10 ಸಾವಿರ ಮನೆ ನೀಡಲಾಗುವುದು ಎಂದಿದ್ದಾರೆ.
ಇವುಗಳಿಂದ ಜಿಲ್ಲೆಗೂ ಅನುಕೂಲ
*ಪಶ್ಚಿಮ ಘಟ್ಟದಲ್ಲಿ ಮಳೆಗಾಲದಲ್ಲಿ ವೇಗವಾಗಿ ಹರಿಯುವ ತೊರೆಗಳಿಗೆ ಅಡ್ಡಲಾಗಿ 500 ಕಾಲುಸಂಕಗಳ ನಿರ್ಮಾಣಕ್ಕೆ 250 ಕೋಟಿ ರೂ. ನೀಡಿದ್ದು, ಇದರಿಂದ ಜಿಲ್ಲೆಗೂ ಅನುಕೂಲವಾಗಲಿದೆ. *ಆನೆ ದಾಳಿ ತಡೆಗೆ ಕಂದಕ, ಬೇಲಿ ನಿರ್ಮಾಣಕ್ಕೆ 100 ಕೋಟಿ ರೂ. ನೀಡಿದ್ದು, ಅವುಗಳಲ್ಲಿ ಜಿಲ್ಲೆಗೂ ಅನುಕೂಲವಾಗಲಿದೆ.* ಸಿಆರ್‌ಜಡ್ ನಿಯಮ ಸಡಿಲಿಸಲು ಕೇಂದ್ರ ಸರ್ಕಾರ ಒಪ್ಪಿದ್ದು, ಇದರಿಂದ ಕರಾವಳಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ. *12 ಹೊಸ ಬಂದರುಗಳ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದು, ಇದರಲ್ಲೂ ಜಿಲ್ಲೆಗೂ ಪಾಲು ಸಿಗುವ ಸಾಧ್ಯತೆ ಇದೆ.


ಇತರ ಕೊಡುಗೆಗಳು:
*ಉತ್ತರ ಕನ್ನಡದಲ್ಲಿ 18 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ಅವರ ಹೆಸರಿನ ವಸತಿಶಾಲೆ
*ಬನವಾಸಿಯ ಮಧುಕೇಶ್ವರ ದೇವಾಲಯ ಸಂಕೀರ್ಣ ಅಭಿವೃದ್ಧಿ ಮಾಡಲು ಅನುದಾನ.
*ಸೊಪ್ಪಿನ ಬೆಟ್ಟ ಹಾಗೂ ಅದೇ ಸ್ವರೂಪದ ಇತರ ಅರಣ್ಯೇತರ ಜಮೀನನ್ನು ಮಂಜೂರು ಮಾಡುವ ಸಂಬAಧ ಅಧ್ಯಯನ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ವರದಿ ಆಧರಿಸಿ ಕ್ರಮ.
*ದಾಂಡೇಲಿ ಹಾಗೂ ಶಿರಸಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ.
*ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಕೆಎಸ್‌ಎಸ್‌ಐಡಿಸಿಯಿಂದ ಕೈಗಾರಿಕಾ ವಸಾಹತು ನಿರ್ಮಾಣ.
*ಮಂಗಳೂರು-ಕಾರವಾರ-ಗೋವಾ-ಮುAಬೈ ವಾಟರ್ ವೇ