ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ಏರ್ಪಡಿಸಿದ್ದ ಮೆಸ್ಕಾಂ ಶಾಖೆ ಗ್ರಾಹಕರ ಸಲಹಾ ಸಮಿತಿ ಸಭೆಯಲ್ಲಿ ಜಿ.ಸಂದೀಪ್, ಬಾಲು ನಾಗರಾಳ್, ಲಲಿತಾ, ಸಂತೋಷ್ ಇತರರಿದ್ದರು. 
ಜಿಲ್ಲೆ

ಕುಪ್ಪಗಡ್ಡೆಯಲ್ಲಿ ಪವರ್ ಗ್ರಿಡ್ ಆರಂಭಿಸಿ

ಸೊರಬ: ತಾಲೂಕಿನ ಕುಪ್ಪಗಡ್ಡೆ, ಗೆಂಡ್ಲ, ತವನಂದಿ ಮತ್ತು ದ್ಯಾವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಕುಪ್ಪಗಡ್ಡೆಯಲ್ಲಿ ಶೀಘ್ರವೇ ಗ್ರಿಡ್ ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಲೂಕಿನ ಕುಪ್ಪಗಡ್ಡೆಯಲ್ಲಿ ಬುಧವಾರ ಏರ್ಪಡಿಸಿದ್ದ ಕುಪ್ಪಗಡ್ಡೆ ಶಾಖಾ ವ್ಯಾಪ್ತಿ ಗ್ರಾಹಕ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರು, ಸಾರ್ವಜನಿಕರು ಮತ್ತು ರೈತರು ಸಮಸ್ಯೆಯನ್ನು ಅಕಾರಿಗಳ ಗಮನಕ್ಕೆ ತಂದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ. ಸಂದೀಪ್ ಮಾತನಾಡಿ, ಜನರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಮಳೆಗಾಲದಲ್ಲಿ ಲೈನ್‌ಮನ್‌ಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕುಪ್ಪಗಡ್ಡೆಯಲ್ಲಿ ಲೈನ್‌ಮನ್‌ಗಳ ವಸತಿ ಗೃಹ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಎಸ್‌ಸಿ ಕಾಲನಿ ಇರುವ ಗ್ರಾಮಗಳಿಗೆ ಟಿಸಿ ಒದಗಿಸುವ ಕುರಿತು ಸಲಹಾ ಸಮಿತಿ ಸದಸ್ಯರು ಚರ್ಚಿಸಿದರು.

ಪ್ರಮುಖರಾದ ಬಾಲು ನಾಗರಾಳ್, ಸಂತೋಷ್ ಕೊರಕೋಡು, ಎಂ.ರಾಜಶೇಖರ್, ವಿರೇಶ್, ಮಲ್ಲಿಕಾರ್ಜುನ, ಭರತ್ ರಾಜ್ ತಾಳಗೊಪ್ಪ ಲಲಿತಾ, ಲೈನ್‌ಮೆನ್‌ಗಳು ಇದ್ದರು.