ರಾಮದುರ್ಗ: ಪ್ರಸಕ್ತ ಸಾಲಿನ ಹುಲಕುಂದ&ಹಿರೇಕೊಪ್ಪ ಕೆ.ಎಸ್.ವಲಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕುನ್ನಾಳ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಾಲಕಿಯರ ಹಾಗೂ ಬಾಲಕರ ವಿಭಾಗದ ಗುಂಪು ಹಾಗೂ ವೈಯಕ್ತಿಕ ಕ್ರೀಡೆಗಳಲ್ಲಿ ಸಾಧನೆ ಮಾಡುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಾಲಕರ ಗುಂಪು ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ವೈಯಕ್ತಿಕ ವಿಭಾಗದಲ್ಲಿ 600 ಮೀಟರ್ ಓಟದಲ್ಲಿ ಹಣಮಂತ ಅಳ್ಳಿ ಪ್ರಥಮ, ಹರೀಶ ನಾಡಗೌಡ್ರ ತೃತೀಯ, ಗುಂಡು ಎಸೆತದಲ್ಲಿ ರಾಹುಲ್ ಕೋಳಿ ಪ್ರಥಮ, ಮನೋಜ ಗಾಣಿಗೇರ ತತೀಯ, ಉದ್ದ ಜಿಗಿತದಲ್ಲಿ ಹಣಮಂತ ಅಳ್ಳಿ ಪ್ರಥಮ, ಶಾಂತಾನಂದ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ಗುಂಪು ಆಟವಾದ ಖೋ&ಖೋದಲ್ಲಿ ಪ್ರಥಮ, ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 100 ಹಾಗೂ 200 ಮೀಟರ್ ಓಟದಲ್ಲಿ ಅಲ್ಪಿಯಾ ನಾಯ್ಕ ಪ್ರಥಮ, 200 ಮೀಟರ್ ಓಟದಲ್ಲಿ ಅಪ್ಸಾನಾ ತಹಸೀಲ್ದಾರ್ ದ್ವೀತಿಯ, 400 ಮೀಟರ್ ಓಟದಲ್ಲಿ ಸರಸ್ವತಿ ಜಟ್ಟನ್ನವರ ಪ್ರಥಮ, 600 ಮೀಟರ್ ಓಟದಲ್ಲಿ ಭಾಗ್ಯಾ ಅಲಕನವರ ಪ್ರಥಮ, ಮೇಘಾ ಕಮತಗಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. 8ನೇ ತರಗತಿ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಅತಾ ಅಳ್ಳಿಗಿಡದ ಪ್ರಥಮ, 400 ಮೀಟರ್ ಓಟದಲ್ಲಿ ಶಾಲಿನಿ ಕಮತಗಿ ಪ್ರಥಮ, ಚಕ್ರ ಎಸೆತದಲ್ಲಿ ಭಾಗ್ಯ ಹುದ್ದಾರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.