ಮಾನಪ್ಪ ಡಿ.ವಜ್ಜಲ್ 
ಜಿಲ್ಲೆ

ಕುಡಿವ ನೀರು ಪೂರೈಕೆ ಕಾಮಗಾರಿ ಪೂರ್ಣಗೊಳಿಸಿ

ಹಟ್ಟಿಚಿನ್ನದಗಣಿ: ಪಟ್ಟಣಕ್ಕೆ ನಿರಂತರ ಕುಡಿವ ನೀರು ಪೂರೈಕೆಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಣಿ ಕಂಪನಿಯ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ಹಟ್ಟಿಗೆ ನೀರು ಪೂರೈಸುವ ಜಾಕ್‌ವೆಲ್ ಕಾಮಗಾರಿ ಮುಗಿದಿದ್ದು, ನೀರು ಪೂರೈಕೆಯಾಗುತ್ತಿದೆಯಾದರೂ ಸಮರ್ಪಕವಾಗಿಲ್ಲ.

ಹಟ್ಟಿಗೆ ಮಾತ್ರ ನೀರು ಪೂರೈಸಲು ಪ್ರತ್ಯೇಕ ಯೋಜನೆ ತಯಾರಿಸಲಾಗುವುದು. ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಕಾಕಾನಗರ ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.


ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಅನುದಾನ ನೀಡಿದರೂ ಯಾವ ರಸ್ತೆಗಳು ಸುಧಾರಣೆ ಕಂಡಿಲ್ಲ. ಅವಶ್ಯವಿರುವ ಕಡೆ ರಸ್ತೆ ಸುಧಾರಣೆಗೆ ಕ್ರಮವಹಿಸಲಾಗುವುದು. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಸದ್ಯ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಹೊಂದಿದ್ದೇವೆ. ಕೆಕೆಆರ್‌ಡಿಬಿ, ಡಿಎಂಎಫ್‌ನಿಂದ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರ ಅಭಿವೃದ್ಧಿ ಮಾಡಲಾಗುವುದು ಎಂದರು.