ಜಿಲ್ಲೆ

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

ಕಾನಹೊಸಹಳ್ಳಿ: ಕ್ಷೇತ್ರದ ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ತರಲಾಗುವುದು. ಈ ಮೂಲಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ತ್ವರಿತವಾಗಿ ಮಾಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಗುಡೇಕೋಟೆ ಸಮೀಪದ ಹುರುಡಿಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದ ಹಳ್ಳಿಗಳ ಜನರ ಬೇಡಿಕೆಯಂತೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿರುವೆ. ರಾಮಸಾಗರಹಟ್ಟಿ ಗ್ರಾಮಕ್ಕೆ ಹಾಸ್ಟೆಲ್ ಮಂಜೂರಾಗಿದೆ. ಕೆ.ರಾಯಾಪುರ, ಹಾಲಸಾಗರ, ಹುರುಡಿಹಳ್ಳಿ ಸೇರಿದಂತೆ ಇತರೆಡೆ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವೆ. ಹುರುಡಿಹಳ್ಳಿಯಲ್ಲಿ ಶೈಕ್ಷಣಿಕ ಹಾಗೂ ಮೂಲ ಸೌಲಭ್ಯಗಳ ಅಗತ್ಯವಿದೆ ಎಂದರು.

ಗುಡೇಕೊಟೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಪಿಡಿಒ ಮತ್ತು ಗ್ರಾಪಂ ಸಿಬ್ಬಂದಿ ಹಳ್ಳಿಗಳಲ್ಲಿ ಕುಡಿವ ನೀರಿನ ಕೊರತೆ ಇರುವ ಗ್ರಾಮಗಳ ಮಾಹಿತಿ ನೀಡಿದರೆ ಸಂಬಂಧಿಸಿದ ಅಧಿಕಾರಿ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಚಿಂತನೆ ಮಾಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಗಂಡಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಓಬಮ್ಮ ರುದ್ರಯ್ಯ, ದಿನ್ನೆ ಮಲ್ಲಿಕಾರ್ಜುನ, ಗಂಟೆ ಬಸವರಾಜ್, ಜಿ.ಬೋರಣ್ಣ, ಸಿದ್ದಣ್ಣ, ಎಂ.ಓಬಣ್ಣ, ಚಿರತುಗುಂಡು ಬಸವರಾಜ್, ಹೊನ್ನಪ್ಪ, ಗ್ರಾಪಂ ಸದಸ್ಯರಾದ ವೈ.ಚನ್ನಪ್ಪ, ನವಲಮ್ಮ ರುದ್ರಮುನಿ, ನೇತ್ರಾವತಿ ಓಬಣ್ಣ, ಯೋಗನಾಂದ, ಸತೀಶ್, ಲೋಕಣ್ಣ ಇತರರಿದ್ದರು.