ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ಆಲಿಸಿದ ಶಾಸಕ

ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಸೌಹಾರ್ದ ದಯಾನ್ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಿವಾಸಿಗಳಿಂದ ದೂರುಬಂದ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ನೀರಿನ ಸಮಸ್ಯೆ ನಿವಾರಿಸಬೇಕು. ಚರಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂಬ ದೂರುಗಳನ್ನು ಶಾಸಕರ ಗಮನಕ್ಕೆ ತಂದರು.

ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ, ಬಡಾವಣೆಯ ಯಾವುದೇ ಭಾಗದಲ್ಲಿಯಾದರೂ ನೀರುಬರುವ ಕಡೆ ಪಾಯಿಂಟ್ ಮಾಡಿಸಿ, ಕೊಳವೆಬಾವಿ ಕೊರೆಸಿ, ಕುಡಿಯುವ ನೀರು ಒದಗಿಸಲಾಗುವುದು ಎಂದರು. ಬಡಾವಣೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ, ಸ್ವಚ್ಛತಾವಾತಾವರಣ ಕಲ್ಪಿಸಬೇಕು. ಶೀಘ್ರವೇ ಕೊಳವೆಬಾವಿಕೊರೆಸಲು ಪಾಯಿಂಟ್ ಮಾಡಿಸಲು ಕ್ರಮವಹಿಸಬೇಕು. ಪೈಪ್‌ಲೈನ್ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಯವರು ಸಹ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಚರಂಡಿಯಲ್ಲಿ ಬಿಸಾಡದೇ, ಕಸದ ವಾಹನಕ್ಕೆ ಹಾಕಬೇಕು ಎಂದು ನಿವಾಸಿಗಳಿಗೆ ತಿಳಿಸಿದರು. ಈ ವೇಳೆ ಚರಂಡಿಯಲ್ಲಿ ಮಡುಗಟ್ಟಿದ್ದ ತ್ಯಾಜ್ಯವನ್ನು ಜೆಸಿಬಿಯಿಂದ ತೆರವುಮಾಡಿ, ನೀರುಸರಾಗವಾಗಿ ಹರಿದುಹೋಗುವಂತೆ ಮಾಡಲಾಯಿತು. ಚರಂಡಿಗೆ ಮುಚ್ಚಲಾಗಿದ್ದ ಸಿಮೆಂಟ್ ಸ್ಲ್ಯಾಬ್ ಗಳನ್ನು ತೆಗೆದುಹಾಕಿ, ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು.

ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್, ಎಇಇ ಪ್ರಕಾಶ್, ಚುಡಾ ಮಾಜಿ ಅಧ್ಯಕ್ಷ ಸಯ್ಯದ್‌ರಫಿ, ಜಿ.ಪಂ ಕೆಡಿಪಿ ಸದಸ್ಯ ಸಯ್ಯದ್, ಸಿದ್ದಿಕ್ ವುಲ್ಲ ನಿವಾಸಿಗಳು ಹಾಜರಿದ್ದರು.