ಯಾದಗಿರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಇರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇರುವ ನೀರನ್ನು ಕುಡಿಯುವ ಉದ್ದೇಶಕ್ಕಷ್ಟೇ ಲಭ್ಯವಾಗುವಂತೆ ಕ್ರಮವಹಿಸಿ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ಸಂಬಂಸಿದ ಅಕಾರಿಗಳಿಗೆ ಸೂಚಿಸಿದರು.
ಸೋಮವಾರ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಲುವೆಗೆ ಅಕ್ರಮವಾಗಿ ತೂಬು, ಪೈಪ್, ಪಂಪ್ಸೆಟ್ಗಳನ್ನು ಅಳವಡಿಸಿದ್ದು ಕಂಡು ಬಂದರೆ ತಕ್ಷಣ ತೆರವು ಗೊಳಿಸಿ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಜಲಾಶಯದಲ್ಲಿ ಒಟ್ಟು 33.31 ಟಿಎಂಸಿ ನೀರು ಸಂಗ್ರಹವಿದೆ. ಡೆಡ್ ಸ್ಟೋರೇಜ್ ಸಾಮಥ್ರ್ಯ 14.76 ಟಿಎಂಸಿ ಇದ್ದು, 240 ಕ್ಯೂಸೆಕ್ ಒಳ ಹರಿವಿದ್ದರೆ, 50/80 ಕ್ಯೂಸೆಕ್ ಹೊರ ಹರಿವಿದೆ. ಇನ್ನೂ 39 ದಿನದವರೆಗೆ ಕುಡಿಯುವ ನೀರು ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಜಲಾಶಯದ ಪಕ್ಕದಲ್ಲಿ ಸುಂದರವಾದ ಉದ್ಯಾನ ನಿಮರ್ಿಸುವ ಯೋಜನೆ ರೂಪಿಸಿಕೊಂಡು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಿ. ಅಲ್ಲದೆ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಜಲಾಶಯ ವೀಕ್ಷಣೆಗೆ ಬರುವ ಜನರ ಸುರಕ್ಷತೆಯ ಬಗ್ಗೆ ಮೊದಲು ಗಮನ ಹರಿಸುವಂತೆ ನಿದರ್ೇಶನ ನೀಡಿದರು.
ಮುಖ್ಯ ಅಭಿಯಂತರ ಆರ್.ಮಂಜುನಾಥ, ಅಕ್ಷಕ ಅಭಿಯಂತರ ಜಿ.ಜಿ.ಪವಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ ಇದ್ದರು.