ಕಲಬುರಗಿ: ಪತಿ, ಪತ್ನಿ ಇಬ್ಬರೂ ಕೂಡಿ ಮದ್ಯ ಸೇವನೆ ಮಾಡಿದ ವೇಳೆ ಉಂಟಾದ ಜಗಳವೂ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಹೊರವಲಯದ ಶಹಾಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ. ಆಳಂದ ತಾಲೂಕಿನ ನಿಂಬರ್ಗಾ ತಾಂಡಾದ ನಿವಾಸಿ ಪ್ರಿಯಾಂಕಾ ರಾಠೋಡ್ (೩೫) ಕೊಲೆಗೀಡಾದ ಮಹಿಳೆ. ಪತಿ ವಕೀಲ ರಾಠೋಡ್ ಕೊಲೆಮಾಡಿದವ.
ಆಳಂದ ತಾಲೂಕಿನ ಕೂಡಲಹಂಗರಾ ಗ್ರಾಮದ ಪ್ರಿಯಾಂಕ ಮತ್ತು ವಕೀಲ ರಾಠೋಡ್ ಮಧ್ಯೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿತ್ತು. ಬುಧವಾರ ರಾತ್ರಿ ಪತಿ, ಪತ್ನಿ ಇಬ್ಬರೂ ಕೂಡಿ ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸೇವನೆ ಬಳಿ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಟ್ಟಿಗೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾನೆ. ಘಟನೆ ಅರಿವಿಗೆ ಬರುತ್ತಲೇ ಎಚ್ಚೆತ್ತ ಪೊಲೀಸರು ಆಳಂದ ತಾಲೂಕಿನ ಸ್ವಗ್ರಾಮ ನಿಂಬರ್ಗಾ ತಾಂಡಾದಲ್ಲಿ ಅಡಗಿದ್ದ ವಕೀಲ ರಾಠೋಡನನ್ನು ಗುರುವಾರ ಬೆಳಗ್ಗೆ ಬಂಧಿಸಿ ಕರೆ ತಂದಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.