ಭಾಲ್ಕಿ: ಸರಾಯಿ ಸಹವಾಸ ಮಾಡುವವರು ಕುಟುಂಬದ ಸರ್ವನಾಶ ಮಾಡುತ್ತಾರೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯಸ್ ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ಹಮ್ಮಿಕೊಂಡ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ತಾಲೂಕು ಅಧ್ಯಕ್ಷ ಶಿವು ಲೋಖಂಡೆ ಮಾತನಾಡಿ, ಯುವಕರು ಕುಡಿತದ ದಾಸರಾಗಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಮದ್ಯವರ್ಜನ ಶಿಬಿರಗಳಿಂದ ಹಲವು ಕುಡುಕರು ಎಚ್ಚೆತ್ತು ಪರಿವರ್ತನೆ ಆಗುತ್ತಿರುವುದು ಶ್ಲಾಘನೀಯ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಗಾದಗಿ ಮಾತನಾಡಿ, ಮದ್ಯಪಾನಿಗಳಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಎಂದರು. ಎಂಟು ದಿನದ ಮದ್ಯವರ್ಜನ ಶಿಬಿರದಲ್ಲಿ ತಾಲೂಕಿನ ಸುಮಾರು ೬೩ ಜನ ಭಾಗವಹಿಸಿದ್ದರು.
ಮುಖಂಡ ಶಿವರಾಜ ಮಲ್ಲೇಶಿ, ಪ್ರಾಚಾರ್ಯ ಅಶೋಕ ರಾಜೋಳೆ, ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ, ಯೋಜನಾಧಿಕಾರಿ ಸುಬ್ರಮಣ್ಯ, ಪ್ರಮುಖರಾದ ಶಿವಾನಂದ ಲಕಾಟಿ, ಕವಿತಾ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ವಿಜಯಕುಮಾರ ರಾಜಭವನ, ಛಾಯಾ ರಾಜಭವನ, ದೀಪಾ ಅಷ್ಟೂರೆ, ರವಿಕುಮಾರ, ವಿಶ್ವನಾಥರಾವ ಮೋರೆ, ಮಾಣಿಕಪ್ಪ ರೇಷ್ಮೆ, ಚಂದ್ರಕಾAತ, ನಾಗೇಶ, ದಿನೇಶ, ವೆಂಕಟೇಶ, ಶರಣಪ್ಪ ಬಳತಕರ್, ಲೋಕೇಶ ಜಬಾಡೆ ಇತರರಿದ್ದರು.