ಜಿಲ್ಲೆ

ಕುಡಾ ಆಯುಕ್ತರ ವರ್ಗಾವಣೆಗೆ ತಡೆಯಾಜ್ಞೆ

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಆಯುಕ್ತ ದಯಾನಂದ ಪಾಟೀಲ್ ವರ್ಗಾವಣೆಗೆ ಕೆಎಟಿ ಮತ್ತೆ ತಡೆಯಾಜ್ಞೆ ನೀಡಿದೆ. ಜುಲೈನಲ್ಲಿ ವರ್ಗಾವಣೆ ಹಾಗೂ ಅಕ್ಟೋಬರ್‌ನಲ್ಲಿ ಅಮಾನತ್ತು ಮಾಡಿದ್ದಾಗಲೂ ಕೆಇಟಿ ಮೊರೆ ಹೋಗಿz್ದÁಗ ತಡೆಯಾಜ್ಞೆ ನೀಡಲಾಗಿತ್ತು. ಎರಡು ಬಾರಿ ವರ್ಗಾವಣೆ ಹಾಗೂ ಒಂದು ಬಾರಿ ಅಮಾನತ್ತು ಸೇರಿ ಮೂರು ಬಾರಿ ಸರ್ಕಾರದ ಕ್ರಮದ ವಿರುದ್ಧ ಕೋರ್ಟ್ ತಟೆಯಾಜ್ಞೆ ನೀಡಿದಂತಾಗಿದೆ. ಮೊದಲ ಸಲ ವರ್ಗಾವಣೆಗೆ ತಡೆಯಾಜ್ಞೆ ನೀಡಿದ್ದರೂ ಅಕ್ಟೋಬರ್‌ನಲ್ಲಿ ಹಿಂದಿನ ಪ್ರಕರಣ ಉ¯್ಲೆÃಖಿಸಿ ಅಮಾನತು ಮಾಡಲಾಗಿತ್ತು. ಆಗಲೂ ಕೆಎಟಿ ತಡೆಯಾಜ್ಞೆ ತರಲಾಗಿತ್ತು.

ಫೆ.೯ರಂದು ದಯಾನಂದ ಪಾಟೀಲ್‌ರನ್ನು ರಾಜ್ಯ ಸರ್ಕಾರ ಕುಡಾ ಆಯುಕ್ತರ ಹುz್ದÉಯಿಂದ ವರ್ಗಾವಣೆ ಮಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಮಂಡಳಿ ಅಧೀನ ಕಾರ್ಯದರ್ಶಿ ಹುz್ದÉಗೆ ನಿಯೋಜಿಸಲಾಗಿತ್ತು. ಕುಡಾ ಆಯುಕ್ತರ ಹುz್ದÉಗೆ ದಯಾನಂದ ಬದಲು ಗಂಗಾಧರ ಶಿವಾನಂದ ಮಾಳಗೆ ಅವರನ್ನು ವರ್ಗಾವಣೆ ಮಾಡಿದ್ದರಿಂದ ಮಂಗಳವಾರ ಫೆ.೧೩ರಂದು ಬೆಳಗ್ಗೆ ೧೦ಕ್ಕೆ ಕುಡಾ ಆಯುಕ್ತರಾಗಿ ಕಾರ್ಯಭಾರ ವಹಿಸಿಕೊಂಡಿz್ದÁರೆ. ಆದರೆ ದಯಾನಂದ ಪಾಟೀಲ್ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ ಮತ್ತೆ ಕುಡಾ ಆಯುಕ್ತರಾಗಿ ಕಾರ್ಯಭಾರ ವಹಿಸಲು ಮುಂದಾಗಿರುವುದರಿAದ ಸಂಘರ್ಷವೇ ಏರ್ಪಟ್ಟಿದಂತಾಗಿದೆ.