ಜಿಲ್ಲೆ

ಬಸವಲಿಂಗ ಶ್ರೀ ಕೊಡುಗೆ ಅಪಾರ - ಡಾ.ಅಲ್ಲಮಪ್ರಭು ಸ್ವಾಮೀಜಿ

ಧರ್ಮರಾಜ ರಾಮನಗೌಡ ಪಾಟೀಲ


ತೆಲಸಂಗ: ಅಕ್ಷರ ದಾಸೋಹಕ್ಕೆ ತೆಲಸಂಗ ಹಿರೇಮಠದ ಲಿಂ.ಬಸವಲಿಂಗ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ನಾಗನೂರ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಶ್ರೀ ಹೇಳಿದರು.

ಗ್ರಾಮದ ಹಿರೇಮಠಕ್ಕೆ ಸೋಮವಾರ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಲಿಂ.ಬಸವಲಿಂಗ ಶ್ರೀಗಳ ಪ್ರವಚನಕ್ಕೆ ಜನಸಾಗರವೇ ಹರಿದುಬರುತ್ತಿತ್ತು. ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದರು. ಅಂದು ಅವರು ಜೋಳಿಗೆ ಹಾಕಿ ಭಿಕ್ಷೆ ತಂದು ಮಕ್ಕಳನ್ನು ಉಣಿಸಿ ಶಿಕ್ಷಣ ನೀಡಿದರು.

ಅವರು ಶ್ರಮಪಡೆದೆ ಹೋಗಿದ್ದರೆ ಸಾವಿರಾರು ಜನರು ಅಕ್ಷರ ಕಲಿಯುತ್ತಿರಲಿಲ್ಲ. ಇಂತಹ ಶ್ರೇಷ್ಠ ಸಮಾಜಮುಖಿ ಕಾರ್ಯಗಳ ಪರಂಪರೆ ಹಾಕಿಕೊಟ್ಟ ತೆಲಸಂಗ ಹಿರೇಮಠ ಉಳಿಸಿ, ಬೆಳೆಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.

ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಶಿಕ್ಷಕ ಅಶೋಕ ಪರುಶೆಟ್ಟಿ, ಪ್ರೊ.ಸುರೇಶ ಸನಗೊಂಡ, ವಕೀಲ ಅಮೋಘ ಖೊಬ್ರಿ, ಆನಂದ ಥೈಕಾರ ಇತರರು ಇದ್ದರು.