ಜಿಲ್ಲೆ

ಕುಟುಂಬಕ್ಕೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೆರವು

ಕೆ.ಆರ್.ಸಾಗರ: ಸಮೀಪದ ಪೇಪರ್ ಮಿಲ್ ಕಾಲನಿಯಲ್ಲಿ ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಶಿವಣ್ಣಾಚಾರ್ ಅವರ ಮನೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಧೈರ್ಯ ತುಂಬಿದರು.

ಶಿವಣ್ಣಾಚಾರ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಗಳು, ದಿನ ಉಪಯೋಗಿ ವಸ್ತುಗಳು ಸುಟ್ಟು ಹೋಗಿದ್ದವು. ಇದರೊಂದಿಗೆ ಮನೆಗೂ ಹಾನಿಯಾಗಿದೆ. ಈ ಹಿನ್ನೆಲೆ ಗುರುವಾರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ದಂಪತಿಗೆ ಆರ್ಥಿಕ ನೆರವು ನೀಡಿದರು.

ಗ್ರಾಪಂ ಮಾಜಿ ಸದಸ್ಯ ವಿಜಯ್, ಧ್ರುವ, ಸ್ಥಳೀಯ ನಿವಾಸಿಗಳು ಇದ್ದರು.