ಜಿಲ್ಲೆ

ಕುಟುಂಬ ರಾಜಕಾರಣ ಅಂತ್ಯಕ್ಕೆ ಹೋರಾಟ

ಮಳಖೇಡ: ಹಿಂದುತ್ವ ವಿರೋಧಿ ಚಟುವಟಿಕೆ, ಭ್ರಷ್ಠಾಚಾರ ಹಾಗೂ ಕುಟುಂಬ ರಾಜಕಾರಣದ ಅಂತ್ಯಕ್ಕಾಗಿ ಹೋರಾಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ಬೀರನಹಳ್ಳಿ ಕ್ರಾಸ್‌ನ ಪಕೃತಿನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಹೊತ್ತು, ದೆಹಲಿಗೆ ಹೋಗುತ್ತಿದ್ದು, ಪಕ್ಷದ ವರಿಷ್ಠರಿಗೆ ನಮ್ಮ ಗುಂಪಿನ ನಿಲುವು ತಿಳಿಸಲಾಗಿದೆ. ಚುನಾವಣೆಯಾಗಿ ವಿಜಯೇಂದ್ರ ಅಧ್ಯಕ್ಷ ಆದರೆ ಆಗಲಿ, ರಾಮಲು ಆದರೂ ತಕರಾರಿಲ್ಲ. ಪಕ್ಷದಿಂದ ವಿಜಯೇಂದ್ರ ಹೊರಗಾದಾಗ ಮಾತ್ರ ಸಮಾಧಾನವಾಗುತ್ತದೆ ಎಂದರು.

ಜಾತಿ ಸಮೀಕರಣ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಲಿಂಗಾಯತರ ಕೋಟಾ ಬಂದರೆ ನಾನು, ಬೇರೆ ಜಾತಿ ಕೋಟಾ ಬಂದರೆ ಅರ್ಹರಿಗೆ ಅವಕಾಶ ದೊರೆಯಲಿದೆ. ಜೀವನದ ಉದ್ಧಕ್ಕು ಖರ್ಗೆ ಮತ್ತು ಯಡಿಯೂರಪ್ಪ ಮಧ್ಯೆ ಹೊಂದಾಣಿಕೆ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಕುಟುಂಬ ರಾಜಕಾರಣ ಕೊನೆಗಾಣಬೇಕಾಗಿದೆ. ಅದಕ್ಕಾಗಿ ನಮ್ಮ ಹೋರಾಟ. ದೆಹಲಿಯಲ್ಲಿ ಪ್ರಮುಖರ ಭೇಟಿಗೆ ಸಮಯ ನೀಡಿದ್ದು, ನೇರ ದೆಹಲಿಗೆ ಹೋಗಿ ಎಲ್ಲರ ಜತೆ ಮಾತುಕತೆ ನಡೆಸಲಾಗುವುದು ಎಂದರು.

ರಾಜ್ಯಾಧ್ಯಕ್ಷ ಸ್ಥಾನದ ವಿಷಯದಲ್ಲಿ ನಮ್ಮದು ಸ್ವಾರ್ಥವಿಲ್ಲ. ಹಿಂದು ಸಮಾಜದ ರಕ್ಷಣೆಗಾಗಿ ಧ್ವನಿ ಎತ್ತಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹುದ್ದೆ ನೀಡಿ ಎಂದು ನಾವು ಕೇಳಿz್ದೆÃವೆ. ಸದಾ ಒಳ ಒಪ್ಪಂದದ ರಾಜಕೀಯ ಮಾಡುವವರಿಂದ ಧರ್ಮದ ರಕ್ಷಣೆ ಹೇಗೆ ಸಾಧ್ಯವಾಗಲಿದೆ ಎಂದರು.