ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಜನಸಂಖ್ಯಾ ಮತ್ತು ಪೌಷ್ಟಿಕ ಆಹಾರ ದಿನಾಚರಣೆಯಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಅಲೋಕ ಎ.ಎನ್ ಮಾತನಾಡಿದರು. ಮಂಜುನಾಥ ಪಾನಘಂಟಿ, ಆರ್.ಎಚ್.ಗೊಂಡೆ, ಎಸ್.ಎಂ. ಪಾಟೀಲ, ಶಂಕರಗೌಡ ಪಾಟೀಲ ಇತರರು ಇದ್ದರು. 
ಜಿಲ್ಲೆ

ಕುಟುಂಬ ಯೋಜನೆಯ ಅರಿವು ಅವಶ್ಯ

ರಾಯಬಾಗ, ಬೆಳಗಾವಿ: ಕುಟುಂಬ ಯೋಜನೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಅಲೋಕ ಎ.ಎನ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಜನಸಂಖ್ಯೆ ನಿಯಂತ್ರಣ ಹಾಗೂ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳು ಜಂಕ್‌ಫುಡ್ ಸೇವನೆಯಿಂದ ದೂರ ಇರಬೇಕೆಂದು ಕಿವಿಮಾತು ಹೇಳಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ ಮಾತನಾಡಿ, ಚೀನಾ ದೇಶ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ನಂತರದ ಸ್ಥಾನದಲ್ಲಿ ಭಾರತವಿದೆ. ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ದೂರ ಮಾಡಲು ಕುಟುಂಬ ಯೋಜನೆಯನ್ನು ಜನ ಪಾಲಿಸಬೇಕು ಎಂದರು.

ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಂಜುನಾಥ ಪಾನಘಂಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ, ಟಿಎಚ್‌ಒ ಎಸ್.ಎಂ. ಪಾಟೀಲ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ಎಪಿಪಿ ಶೇಖರ ಬಡಗಾಂವೆ, ಎಂ.ಎಂ.ಚಿಂಚಲಿಕರ, ಆರ್.ಬಿ.ಪವಾರ, ಎಸ್.ಎಸ್.ಪಾಟೀಲ , ಸರೋಜಿನಿ ದೊಡ್ಡಮನಿ, ಸಾವಿತ್ರಿ ಕರಗುಪ್ಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.