ಜಿಲ್ಲೆ

ಕುಕ್ಕೂರುದೊಡ್ಡಿ ಜಯರಾಂ ತಂಡಕ್ಕೆ ಭರ್ಜರಿ ಜಯ : ಮಳೂರು ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಕ್ಕೆ ಚುನಾವಣೆ

ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಮಳೂರು ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದೆ.

ಸಂದ ಆವರಣದಲ್ಲಿ ಭಾನುವಾರ ಚುನಾವಣೆ ಪ್ರಕ್ರಿಯೆ ನಿಗದಿಯಾಗಿತ್ತು. 12 ನಿರ್ದೇಶಕರ ಸ್ಥಾನದ ಪೈಕಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿದ್ದು, ಬಾಕಿ 9 ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

ಜೆಡಿಎಸ್​ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಹಾಗೂ ಸಂದ ಮಾಜಿ ಅಧ್ಯಕ್ಷ ಕುಕ್ಕೂರುದೊಡ್ಡಿ ಜಯರಾಂ ನೇತೃತ್ವದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದರು.

ವಿಜೇತ ಅಭ್ಯರ್ಥಿಗಳು: ಸಾಲಗಾರರ ಸಾಮಾನ್ಯ ಮೀಸಲು ಕ್ಷೇತ್ರದಿಂದ ಎಂ.ಎಸ್​.ರವಿ, ಕುಕ್ಕೂರುದೊಡ್ಡಿ ಜಯರಾಂ, ಪುಟ್ಟಸ್ವಾಮಿ (ಟೆಂಪೋ), ಎಂ.ಸಿ.ರವಿ, ರಾಜೇಶ್​ ಗೆಲುವು ಸಾಧಿಸಿದರು. ಮಹಿಳಾ ಮೀಸಲು ಸ್ಥಾನದಿಂದ ಜಯಮ್ಮ, ನಾಗವೇಣಿ, ಹಿಂದುಳಿದ ಬಿ ಮೀಸಲು ಕ್ಷೇತ್ರದಿಂದ ಎಂ.ಎನ್​. ರಾಮಲಿಂಗು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಪುಟ್ಟಸ್ವಾಮಿ ವಿಜೇತರಾದರು. ಮಾಯಿಗಯ್ಯ ಹಾಗೂ ದಾಸಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜಿದ್ದಿಜಿದ್ದಿನ ಪೈಪೋಟಿ: ಕುಕ್ಕುರುದೊಡ್ಡಿ ಜಯರಾಂ ಹಾಲಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ಕಾರಣ ಮುಂದಿನ ಅವಧಿಗೆ ಬ್ಯಾಂಕ್​ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯಲು ಈ ಸಂದ ಆಡಳಿತ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿತ್ತು. ಇನ್ನೊಂದೆಡೆ ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್​.ಲಿಂಗೇಶ್​ಕುಮಾರ್​ ತಮ್ಮ ಪಕ್ಷದ ಬೆಂಬಲಿತರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಹರಸಾಹಸ ನಡೆಸಿದ್ದರು. ಆದ್ದರಿಂದ ಈ ಚುನಾವಣೆ ಕುತೂಹಲ ಕೆರಳಿಸಿತ್ತು. ಸಂದ ಚುನಾವಣೆ ನಡೆದ ಮಳೂರು ಪಟ್ಟಣ ಶಾಲೆಯ ಆವರಣದಲ್ಲಿ ಏರ್ಪಾಡಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ತಾಲೂಕಿನ ಜೆಡಿಎಸ್​ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದು ಚುನಾವಣೆ ಕಾವಿಗೆ ಸಾಯಾಗಿತ್ತು. ಅಂತಿಮವಾಗಿ ಕುಕ್ಕುರುದೊಡ್ಡಿ ಜಯರಾಂ ತಂಡ ಗೆಲುವು ಸಾಧಿಸಿದ್ದು, ಲಿಂಗೇಶ್​ಕುಮಾರ್​ ಮುಖಭಂಗ ಅನುಭವಿಸಿದರು. ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವ ವದಂತಿ ದಟ್ಟವಾಗಿದೆ.

ವಿಜಯೋತ್ಸವ: ಚುನಾವಣೆಯಲ್ಲಿ ಕುಕ್ಕುರುದೊಡ್ಡಿ ಜಯರಾಂ ನೇತೃತ್ವದ ಅಭ್ಯರ್ಥಿಗಳು ಜಯ ಸಾಧಿಸುತ್ತಲೇ ಜೆಡಿಎಸ್​ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು. ತಾಲೂಕು ಜೆಡಿಎಸ್​ ಅಧ್ಯಕ್ಷ ಎಚ್​.ಸಿ. ಜಯಮುತ್ತು, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್​ ಮುಖಂಡರಾದ ಹಾಪ್​ಕಾಮ್ಸ್​ ದೇವರಾಜು, ಸಿಂ.ಲಿಂ. ನಾಗರಾಜು, ನರ್ಸರಿ ಲೋಕೇಶ್​, ಭಾನುಪ್ರಸಾಸ್​, ಎಂಸಿಎಸ್​ ಮೆಹರೀಶ್​, ಗ್ರಾಮದ ಮುಖಂಡರಾದ ಜಟ್ಟಿರೇಗೌಡ, ಎಂ.ಜೆ ಶಿವರಾಮಯ್ಯ, ಬೋಳಮರಿಗೌಡ, ಬೈರನರಸಿಂಹಯ್ಯ, ದಾಸಪ್ಪ, ಗವಿಯ ಸೇರಿ ಹಲವು ಮುಖಂಡರು ಇದ್ದರು. ಗ್ರಾಮಾಂತರ ಸಿಪಿಐ ಬಿ. ಶಿವಕುಮಾರ್​ ನೇತೃತ್ವದಲ್ಲಿ ನಾಲ್ವರು ಪಿಎಸ್​ಐ ಒಳಗೊಂಡಂತೆ 40ಕ್ಕೂ ಹೆಚ್ಚು ಸಿಬ್ಬಂದಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.

ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈ ಹಿಂದೆ ಜೆಡಿಎಸ್​ನಲ್ಲಿಯೇ ಇದ್ದ ಲಿಂಗೇಶ್​ಕುಮಾರ್​ ಸಾಕಷ್ಟು ಪ್ರಯತ್ನಿಸಿದರು. ಆದರೆ, ಅವರ ತಂತ್ರಗಳು ಲಿಸಲಿಲ್ಲ. ಚುನಾವಣೆ ಅಂತಿಮ ಟ್ಟ ತಲುಪಿದಾಗ ಜಯರಾಂ ಬಿಟ್ಟು ಎಲ್ಲ ಜೆಡಿಎಸ್​ ಬೆಂಬಲಿತರಿಗೆ ಮತಹಾಕಿ ಎಂದು ಹೇಳುವ ಮೂಲಕ ಅವರನ್ನು ನಂಬಿದ್ದ ಪಕ್ಷದ ಬೆಂಬಲಿತರಿಗೆ ಮೋಸ ಮಾಡಿದರು. ಸಂದ ಅಧ್ಯಕ್ಷನಾಗಿದ್ದಾಗ ನಾನು ಮಾಡಿದ್ದ ಅಭಿವೃದ್ಧಿ ಕಾರ್ಯಗಳು ನನ್ನ ಕೈಹಿಡಿದಿವೆ. ಕುಕ್ಕುರುದೊಡ್ಡಿ ಜಯರಾಂ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ