ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಉದ್ಯಮಿ ನಾರಾಯಣಲಾಲ್ ಭಾನುವಾರ ಪಾದಯಾತ್ರೆ ಮೂಲಕ ಕುಂಭಮೇಳಕ್ಕೆ ತೆರಳಿದರು.
ಪ್ರತಿ ದಿನ 70 ಕಿ.ಮೀ. ಕ್ರಮಿಸುವ ಮೂಲಕ ಫೆ.26ರೊಳಗೆ ವಾರಾಣಸಿ ತಲುಪುವ ಗುರಿ ಹೊಂದಿರುವ ನಾರಾಯಣಲಾಲ್ ಅವರನ್ನು ಗ್ರಾಮದ ಭಗತ್ ಸಿಂಗ್ ಯುವಕ ಸಂಘದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟರು. ಸಂಘದ ಕೆ.ವೆಂಕಟೇಶ, ಟಿ.ಎಸ್.ವಿನೋದ್ ಕುಮಾರ್, ರಾಮಕೃಷ್ಣ, ರಾಜೇಂದ್ರ, ಗೋವಿಂದ, ಕಿರಣ, ಪಾಪಣ್ಣ, ಭೋಲಾರಾಂ, ಚಿನ್ನಸ್ವಾಮಿ, ಪೊನ್ನಸ್ವಾಮಿ, ಮಹೇಂದ್ರ, ನಂಜೇದೇವರು, ವಿನಯ್ ಇತರರು ಇದ್ದರು.