ಚಿಕ್ಕಬಳ್ಳಾಪುರ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಳದ ನಡುವೆಯೂ ಜಾನುವಾರುಗಳ ಸಾಕಾಣೆಯ ಒಲವು ಕಡಿಮೆಯಾಗಿಲ್ಲ ಎಂದು ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನಂದಿಯ ಶ್ರೀ ಭೋಗ ನಂದೀಶ್ವರ ಸ್ವಾಮಿ ಆಲಯದ ಆವರಣದಲ್ಲಿ ನಂದಿ ಬ್ರಹ್ಮ ರಥೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಚಟುವಟಿಕೆಯಲ್ಲಿ ರಾಸುಗಳ ಸ್ಥಾನವನ್ನು ಯಂತ್ರೋಪಕರಣಗಳನ್ನು ಆಕ್ರಮಿಸಿಕೊಳ್ಳುತ್ತವೆ. ಇದರ ನಡುವೆ ರೈತರು ಪ್ರೀತಿಯಿಂದ ಜಾನುವಾರುಗಳನ್ನು ಸಾಕುತ್ತಿದ್ದು ಮೂಕ ಜೀವಿಗಳೊಂದಿಗೆ ಹೆಚ್ಚಿನ ಆತ್ಮೀಯತೆ ಹೊಂದಿರುತ್ತಾರೆ ಎಂದರು.
ಪ್ರತಿ ವರ್ಷ ನಂದಿ ಜಾತ್ರೆಗೆ ರಾಸುಗಳು ಹೆಚ್ಚಿಗೆ ಆಗಮಿಸುವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಧುನಾಥರೆಡ್ಡಿ, ಪತ್ರಿಕಾ ಏಜೆಂಟ್ ಮುನೇಗೌಡ ಮತ್ತಿತರರು ಇದ್ದರು.
ಬಹುಮಾನ ವಿಜೇತರು: * ಹೋರಿಗಳ ವಿಭಾಗದಲ್ಲಿ ನಂದಿಯ ನರೇಂದ್ರ ಬಾಬು (ಪ್ರಥಮ), ಅರಸನಹಳ್ಳಿ ಎ.ಗೋವಿಂದಪ್ಪ (ದ್ವಿತೀಯ) ಮತ್ತು ದೇವನಹಳ್ಳಿ ಹೋರಿ ವೆಂಕಟರೆಡ್ಡಿ(ತೃತೀಯ), * ಹಾಲುಹಲ್ಲು ಜೋಡಿ ಎತ್ತುಗಳ ವಿಭಾಗದಲ್ಲಿ ವೀರಾಪುರ ಪಿಳ್ಳ ಆಂಜಿನಪ್ಪ (ಪ್ರಥಮ), ಚೊಕ್ಕಹಳ್ಳಿ ಮನೋಹರ (ದ್ವಿತೀಯ), ವಿಜಯಪುರ ಆನಂದ (ತೃತೀಯ), * ಎರಡು ಹಲ್ಲು ಜೋಡಿ ಎತ್ತುಗಳ ವಿಭಾಗದಲ್ಲಿ ಶ್ರೀರಾಮಪುರ ಸಿ.ಸಾಗರ್ (ಪ್ರಥಮ), ಕುಪ್ಪಳ್ಳಿ ಕೆ.ಲೋಕೇಶ್ (ದ್ವಿತೀಯ), ಅರಸನಹಳ್ಳಿ ನವೀನ್ (ತೃತೀಯ), * ನಾಲ್ಕುಹಲ್ಲು ಜೋಡಿ ಎತ್ತುಗಳ ವಿಭಾಗದಲ್ಲಿ ಹೆಗ್ಗಡಿನಹಳ್ಳಿ ಎಂ.ಮುನಿರಾಜು(ಪ್ರಥಮ), ಕಾರಹಳ್ಳಿ ಸಿ.ರಾಮಾಂಜಿನಪ್ಪ(ದ್ವಿತೀಯ), ಅರಸನಹಳ್ಳಿ ಎ.ಬಿ.ಸಚಿನ್(ತೃತೀಯ), *ಆರು ಹಲ್ಲು ಜೋಡಿ ಎತ್ತುಗಳ ವಿಭಾಗದಲ್ಲಿ ರೆಡ್ಡಿಹಳ್ಳಿಯ ಹೋರಿ ವೆಂಕಟರೆಡ್ಡಿ(ಪ್ರಥಮ), ಮುನಿರಾಜು (ದ್ವಿತೀಯ), * ತುಂಬುಹಲ್ಲು ಜೋಡಿ ಎತ್ತುಗಳ ವಿಭಾಗದಲ್ಲಿ ವಿಜಯಪುರದ ಮರವೆ ನಾರಾಯಣಪ್ಪ (ಪ್ರಥಮ), ರೆಡ್ಡಹಳ್ಳಿ ಹೋರಿ ವೆಂಕಟರೆಡ್ಡಿ (ದ್ವಿತೀಯ), ಶಿಡ್ಲಘಟ್ಟ ಎಸ್.ರವಿ(ತೃತೀಯ) ಬಹುಮಾನ ಮತ್ತು ಭಾಗವಹಿಸಿದ ಎಲ್ಲರೂ ಸಮಾಧಾನಕರ ಬಹುಮಾನ ಪಡೆದರು.