ಜಿಲ್ಲೆ

ಕುಂದಗೋಳ ಪಪಂ ಮಹಿಳೆಯರ ಪಾಲು?

Dharwad

ಕುಂದಗೋಳ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟವಾಗಿದೆ.

ಇದರಿಂದ ಅಧ್ಯಕ್ಷ ಗಾದಿ ಏರಲು ಆಕಾಂಕ್ಷಿಗಳಲ್ಲಿ ಕೆಲವರಿಗೆ ನಿರಾಸೆಯಾದರೆ, ಮತ್ತೆ ಕೆಲವರಿಗೆ ಸಂತೋಷವಾಗಿದೆ. ಇತ್ತೀಚೆಗೆ ಪಟ್ಟಣ ಪಂಚಾಯಿತಿಯ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ 12 ಸ್ಥಾನ ಪಡೆದಿದೆ. ಕಾಂಗ್ರೆಸ್​ನಿಂದ 5, ಇಬ್ಬರು ಪಕ್ಷೇತರರು ಆ್ಕಯೆಾಗಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಬಹá-ತೇಕ

ಸದಸ್ಯರಿಗೆ ನಿರಾಸೆ ಉಂಟಾಗಿದೆ. ಬಿಜೆಪಿ 12 ಸದಸ್ಯ ಬಲದಲ್ಲಿ 8 ಪುರುಷ ಸದಸ್ಯರಿದ್ದಾರೆ. 4 ಮಹಿಳಾ ಸದಸ್ಯರು ಇದ್ದಾರೆ. ಮೀಸಲಾತಿ ಅಧ್ಯಕ್ಷ ಸ್ಥಾನ ಹಿಂದುಳಿದ ಅ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾತಿ ಆದೇಶ ಹೊರಬಿದ್ದಿರá-ವುದು ಬಿಜೆಪಿ ಪುರುಷ ಸದಸ್ಯರಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ. ಮೀಸಲಾತಿ ವಿರುದ್ಧ ಕೋರ್ಟ್​ಗೆ ಹೋಗá-ವ ಮಾತುಗಳು ಕೇಳಿ ಬಂದಿದೆ.