ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಪಂನ 2ನೇ ವಾರ್ಡ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮಹಿಳೆಯರು ಮತದಾನ ಮಾಡಲು ಸರದಿಯಲ್ಲಿ ನಿಂತಿರುವುದು. 
ಜಿಲ್ಲೆ

ಕುಂಟೋಜಿ ಗ್ರಾಪಂ ಶೇ.76.84 ರಷ್ಟು ಮತದಾನ

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸ್ಸು ಸಜ್ಜನ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಚುನಾವಣೆ ನಡೆಯಿತು.

ಇದೇ ಮತಗಟ್ಟೆಯಲ್ಲಿ ಸ್ಥಳೀಯ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ದೇವರು ಮತದಾನ ಮಾಡಿದರು. ಶೇ.76.84 ರಷ್ಟು ಮತದಾನವಾಗಿದೆ. ಚುನಾವಣಾಧಿಕಾರಿಯಾಗಿ ಉಮೇಶ ಮಾಟೂರ, ಸಹಾಯಕ ಚುನಾವಣಾಧಿಕಾರಿಯಾಗಿ ವಿನೋದ ಝಿಂಗಾಡೆ, ಸಿಬ್ಬಂದಿ ಸಂಗಮೇಶ ಕುಂಬಾರ, ಎಂ.ಬಿ.ಗುಡಗುಂಟಿ, ಅರವಿಂದ ಬಿರಾದಾರ, ಪ್ರಿಸೈಡಿಂಗ್ ಅಧಿಕಾರಿಯಾಗಿ ಎಸ್.ಆರ್.ಪಾಟೀಲ ಕಾರ್ಯ ನಿರ್ವಹಿಸಿದರು. ಇಬ್ಬರು ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.