ಜಿಲ್ಲೆ

ಕುಂಜಿಲ ಗ್ರಾಮದಲ್ಲಿ ಚದುರಂಗ ಆಟ ಆಡೋಣ ಬಾ ಅಭಿಯಾನ

ನಾಪೋಕ್ಲು: ಸಮೀಪದ ಕುಂಜಿಲ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಚದುರಂಗ ಆಟ ಆಡೋಣ ಬಾ ಅಭಿಯಾನ ಜರುಗಿತು.


ಇದರಲ್ಲಿ 25 ಸ್ಪರ್ಧಿಗಳಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಎಂ.ಸಿ.ಶಿವಾನಿ, ದ್ವಿತೀಯ ಪಿ.ಎ.ಹಬೀಬ್, ಜೂನಿಯರ್ ವಿಭಾಗದಲ್ಲಿ ಪ್ರಥಮ ಎ.ಕೆ.ಪೊನ್ನಪ್ಪ, ದ್ವಿತೀಯ ಪಿ.ಎ.ಸಬೀರ್, ಸೀನಿಯರ್ ವಿಭಾಗದಲ್ಲಿ ಪ್ರಥಮ ಕೆ.ಬಿ.ವಿನೋದ್, ದ್ವಿತೀಯ ಎಂ.ಯು.ಮುಸ್ತಫಾ ಪಡೆದುಕೊಂಡರು.
ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ತಾಲೂಕು ಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ವಹಿಸಿದ್ದರು. ವಿಜೇತರಿಗೆ ಅರ್ಹತಾ ಪತ್ರ ನೀಡಿ ಗೌರವಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ, ಚೇಯ್ಯಂಡಾನೆ ಗ್ರಾಮ ಪಂಚಾಯಿತಿ ಸದಸ್ಯ ಚೊಯಮಾಡಂಡ ಪೊನ್ನಪ್ಪ, ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.