ಚಿತ್ರದುರ್ಗ: ತಾಲೂಕಿನ ಕುಂಚಿಗನಾಳ್ ಗ್ರಾಮದಲ್ಲಿ ದಾವಣಗೆರೆ ವಿವಿ, ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ಯುವ ರೆಡ್‌ಕ್ರಾಸ್ ಘಟಕದಿಂದ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಸಂದೀಪ್, ಸಹಾಯಕ ಪ್ರಾಧ್ಯಾಪಕ ಡಾ.ಆರ್.ಜಿ.ಧನಂಜಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಆರ್.ರಂಗಸ್ವಾಮಿ, ಗಾಪಂ ಸದಸ್ಯೆ ಚೈತ್ರಾ ಲಕ್ಷ್ಮಿಕಾಂತ್, ಪ್ರೊಫೆಸರ್‌ಗಳಾದ ಎನ್.ಗಂಗಮ್ಮ, ಎನ್.ಶ್ರೀನಿವಾಸ, ಎನ್.ಲಕ್ಷ್ಮಿಕಾಂತ್, ಶಿಬಿರ ಸಂಪರ್ಕಾಧಿಕಾರಿ ಡಾ.ಹೇಮಲತಾ, ಹೊಳಲ್ಕೆರೆ ಎಪಿಎಂಸಿ ಲೆಕ್ಕಾಧೀಕ್ಷಕ ಎ.ಜಿ.ಸುರೇಂದ್ರಬಾಬು, ಮುಖ್ಯ ಶಿಕ್ಷಕಿ ವೀರಮಂಜುಳಾ ದೇವಿ ಇತರರಿದ್ದರು.