ಜಿಲ್ಲೆ

ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸೆಗೆ ಇನ್‌ಪ್ಲಾಂಟ್ಸ್ ಉಚಿತ

ಚಿತ್ರುದುರ್ಗ:ಜಿಲ್ಲಾಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ,ಎಬಿ-ಎಆರ್‌ಕೆ ಅಡಿ ನೋಂದಣಿಯಾದ ಶಸ್ತ್ರ ಚಿ ಕಿತ್ಸೆಗೆ ಅವಶ್ಯವಿರುವ ಎಲ್ಲ ಇನ್‌ಪ್ಲಾಂಟ್ಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ರೋಗಿಗಳು ಇದರ ಸದುಪಯೋಗ ಪಡೆದು ಕೊಳ್ಳಲು ಎಬಿ-ಎಆರ್‌ಕೆ ಅಡಿ ನೋಂದಣಿ ಮಾಡಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.