ಜಿಲ್ಲೆ

ಕೀಲು, ಎಲುಬು ಸಂಘದ ವಾರ್ಷಿಕ‌ ಸಮ್ಮೇಳನ ಜ.31ರಿಂದ

reportergvt

ಬಳ್ಳಾರಿ: ಹೊಸಪೇಟೆ ಮತ್ತು ಬಳ್ಳಾರಿ ಕೀಲು ಮತ್ತು ಎಲುಬು ವೈದ್ಯರ ಸಂಘದ ವತಿಯಿಂದ 44ನೇ ಕರ್ನಾಟಕ ಕೀಲು ಮತ್ತು ಎಲುಬು ಸಂಘದ ವಾರ್ಷಿಕ‌ ಸಮ್ಮೇಳನ
ಜ.31ರಿಂದ ಫೆ.2ರವೆರೆಗೆ ಮೂರು ದಿನಗಳ ಕಾಲ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅರ್ಥೋಪೆಡಿಕ್ ಅಸೋಸಿಯೇಷನ್ ಮುಖ್ಯಸ್ಥ ಡಾ.ಅಶ್ವೀನಿಕುಮಾರ ಸಿಂಗ್ ತಿಳಿಸಿದರು.


ಸಮ್ಮೇಳನವನ್ನು 28ವರ್ಷಗಳ ನಂತರ ವಿಮ್ಸ್ ಆಸ್ಪತ್ರೆಯ ಅಡಿಟೋರಿಯಂ ಹಾಲ್ ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಮ್ಮೇಳನದ ಅಂಗವಾಗಿ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ, 600ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳ ಪ್ರಸ್ತುತ ಪಡಿಸುವಿಕೆ, ಚರ್ಚೆ, ಉಪನ್ಯಾಸ, ಭಾಷಣ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.


ಎಲುಬು ಮತ್ತು ಕೀಲು ಸಮಸ್ಯೆಯಿರುವ ಇಬ್ಬರು ರೋಗಿಗಳಿಗೆ ಸಮ್ಮೇಳನದಲ್ಲಿ ಲೈವ್ ಆಪರೇಷನ್ ಮಾಡಲಾಗುತ್ತದೆ‌
ವಕ್ರಪಾದವಿರುವ 40ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಖ್ಯಾತಿಯ ಹತ್ತು ಜನ ವೈದ್ಯರು ಸೇರಿ ದೇಶ, ವಿದೇಶಗಳ ಒಂದು ಸಾವಿರ ಖ್ಯಾತ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಡಾ.ಸತೀಶ, ಡಾ.ಕೆ.ವಿ.ಪಿ.ರಾವ್, ಡಾ.ಶ್ರೀನಿವಾಸ, ಡಾ.ಶಡ್ರಾಕ್ ಇದ್ದರು.