ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಸೆ.10ರಂದು ನಡೆಯಲಿದ್ದು ಕಿಸಾನ್ ಸಹಕಾರ ಪ್ಯಾನಲ್‌ಗೆ ರೈತ ಮತದಾರರು ಮತ ನೀಡಿ ಆಯ್ಕೆ ಮಾಡಿದ್ದಲ್ಲಿ, ಸದಸ್ಯರಿಗೆ 50 ಕೆ.ಜಿ.ಸಕ್ಕರೆಯನ್ನು ಉಚಿತವಾಗಿ ವಿತರಣೆ ಮಾಡುತ್ತೇವೆ ಎಂದು ಪ್ಯಾನಲ್ ಮುಖಂಡ ಮಲ್ಲಪ್ಪಣ್ಣ ಮುರಗೋಡ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ದಿ. ಮಲ್ಲಾರಿಗೌಡ ಪಾಟೀಲ ಅವರ ಸಹಕಾರದಿಂದ ದಿ.ಆರ್.ಸಿ. ಬಾಳೇಕುಂದರಗಿ ಕಾರ್ಖಾನೆ ಸ್ಥಾಪನೆಗೆ ಮುಂದಾದಾಗ ಅವರ ಸಹಪಾಠಿಗಳಾದ ನಾವು, ಗುರುಪುತ್ರಪ್ಪ ಹೊಸಮನಿ ಷೇರು ಸಂಗ್ರಹಿಸಿದ್ದೇವೆ. ನಮ್ಮ ವಿರೋ ಪ್ಯಾನಲ್ ಮುಖಂಡರು ನಮ್ಮನ್ನು ಕಡೆಗಣಿಸಿದ್ದರಿದ ರೆತ ಸದಸ್ಯರ ಒತ್ತಾಸೆಯೆಂತೆ ಪ್ಯಾನಲ್ ಮಾಡಿದ್ದೇವೆ ಎಂದರು.
ಕಾರ್ಖಾನೆ ಮಾಜಿ ಅಧ್ಯಕ್ಷ, ಅಭ್ಯರ್ಥಿ ಗುರುಪುತ್ರಪ್ಪ ಹೊಸಮನಿ ಮಾತನಾಡಿ, ನನ್ನ ಎರಡೂವರೆ ವರ್ಷಧ ಅಕಾರ ಅವಯಲ್ಲಿ ಕಾರ್ಖಾನೆಯ ಅಪೆಕ್ಸ್ ಬ್ಯಾಂಕ್ ಸುಮಾರು 12 ಕೋಟಿ ರೂ. ಸಾಲ, ಕಾಲ್ ಡಿಪಾಸಿಟ್ ಬಡ್ಡಿ ಹಣ ತೀರಿಸಿದ್ದೇವೆ. ಶುದ್ಧ ಆಡಳಿತಕ್ಕಾಗಿ ಕಿಸಾನ್ ಸಹಕಾರ ಪ್ಯಾನಲ್ ಬೆಂಬಲಿಸಿ ಎಂದರು.
ಅಭ್ಯರ್ಥಿ ಅಶೋಕ ಹುದ್ದಾರ ಮಾತನಾಡಿ, ಎಲ್ಲ ರೆತ ಸದಸ್ಯರಿಗೆ ಮತದಾನ ಹಕ್ಕು ಹೊಂದಲು ನಮ್ಮ ತಂಡ ಶ್ರಮಿಸಿದೆ ಎಂದರು. ಅಭ್ಯರ್ಥಿಗಳಾದ ನಿಂಗಪ್ಪ ತಡಕೋಡ, ಗಂಗಾಧರ ಹೊಂಡದ, ಚಂದ್ರಶೇಖರ ಭರಮಣ್ಣವರ ಇತರರು ಇದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ