ಗೋಣಿಕೊಪ್ಪ: ಬೆಂಗಳೂರು ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಿಐಎಸ್‌ಸಿಇ ಈಜು ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾಲ್ಸ್ ಶಾಲೆಯ ಕಿಶಾನ್ ಶೇಶ್ ಗೌಡ ಗೆಲುವು ಸಾಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
19 ವಯೋಮಿತಿಯ ವಿಭಾಗದಲ್ಲಿ ಕಿಶಾನ್ ಶೇಶ್ ಗೌಡ 100 ಮೀ. ಮತ್ತು 50 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯೆಯಾದರು. ಜತೆಗೆ ಬೆಸ್ಟ್ ಸ್ವಿಮ್ಮರ್ ಟ್ರೋಫಿಗೂ ಭಾಜನರಾದರು.
ಕಾಲ್ಸ್ ಮತ್ತು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್‌ನ ಕ್ರೀಡಾಪಟುಗಳಾದ ಸಚಿನ್‌ಗೌಡ, ಎಚ್.ರುಶಿಲ್, ವಿ.ಶಶಾಂಕ್, ಎಸ್.ಸ್ಕಂದ, ಎಸ್.ಪ್ರೀತಂ, ಟಿ.ತನಿಷ್ಕ, ಕೆ.ಶಿಮೋನ್, ಇಂಚರಗೌಡ, ಬಿ.ತನಿಷಾ, ಎಸ್.ಸಮರ್ಥ ಸ್ಪರ್ಧಿಸಿದ್ದರು.