ಚಿಕ್ಕಮಗಳೂರು: ಕಿವಿ ಸಮಸ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿದೆ. ಎಲ್ಲ ಅಂಗಾಗಳAತೆ ಕಿವಿ ಸಹಿತ ಮಹತ್ವದ ಅಂಗವಾಗಿದೆ. ಕಿವಿಯ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಶಾಶ್ವತ ಕಿವುಡರಾಗುವ ಸಂಭವವಿದೆ ಎಂದು ಹಿರಿಯ ವೈದ್ಯ ಡಾ. ಕೆ.ಸುಂದರಗೌಡ ತಿಳಿಸಿದರು.
ನಗರದ ಐ.ಜಿ.ರಸ್ತೆ ಸಮೀಪ ಡಾ. ಸುಂದರಗೌಡ ತಂಡ ಹಾಗೂ ಈಶ್ವರ್ ಮಲ್ಪೆ ಸಹಯೋಗದಲ್ಲಿ ವಿಜಯ ಡೆಂಟಲ್ ಕೇರ್‌ನಲ್ಲಿ ಏರ್ಪಡಿಸಿದ್ದ ಉಚಿತ ಶ್ರವಣ ತಪಾಸಣಾ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಶ್ರವಣದೋಷ ಸಮಸ್ಯೆ ವಯಸ್ಕರರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಲ್ಲೇ ಕಂಡು ಬರುತ್ತಿರುವುದು ಆತಂಕದ ಸಂಗತಿ. ಮತ್ತೊಂದೆಡೆ ವಿಪರೀತ ವಾಹನಗಳ ಕರ್ಕಶ ಧ್ವನಿ ಹಾಗೂ ಮೆರವಣಿಗೆ, ಜಾಥಾದಲ್ಲಿ ಬಳಸುವಂಥ ಡಿಜೆಗಳ ಅತಿಯಾದ ಶಬ್ದದಿಂದ ಕಿವಿಡುತನ ಸಂಭವಿಸಬಹುದು ಎಂದು ತಿಳಿಸಿದರು.
ಮಾನವನ ದೇಹದಲ್ಲಿ ಮೂಳೆಯಿಲ್ಲದ ಅಂಗ ಕಿವಿಗಳು, ಕನಿಷ್ಟ ಮೂರು ತಿಂಗಳಿಗೊಮ್ಮೆ ಕಿವಿ ಸ್ವಚ್ಚಗೊಳಿಸುವುದು. ಸಣ್ಣಪುಟ್ಟ ಸಮಸ್ಯೆಗಳು ಎದುರಾದರೆ ನಿರ್ಲಕ್ಷö್ಯವಹಿಸದೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು. ಶೇ.೭೦ರಷ್ಟು ಸಮಸ್ಯೆ ಬಂದಾದ ಮೇಲೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಶಾಶ್ವತ ಕಿವುಡರಾಗಿ ಬಳಿಕ ಸಾಧನ ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಧುನಿಕ ಯುಗದಲ್ಲಿ ಮನುಷ್ಯನ ಶರೀರಕ್ಕೆ ಮೊಬೈಲ್‌ನಿಂದಲೂ ಆಪತ್ತುಗಳಿವೆ. ದೂರಪ್ರಯಣ ಅಥವಾ ಬೈಕ್‌ರೈಡ್‌ಗಳಲ್ಲಿ ಇಂದಿನ ಯುವಸಮೂಹ ವಿಪರೀತ ಧ್ವನಿಯಿಂದ ಗಂಟೆಗಟ್ಟಲೇ ಹೇರ್‌ಪೋನ್ ಬಳಕೆ ಮಾಡುವುದರಿಂದ ಕಿವಿತಮಟೆಗೆ ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಯುವಕರು ಎಚ್ಚೆತ್ತು ಬಳಕೆಗೆ ಬೇಕಾದಷ್ಟು ಮಾತ್ರ ಉಪಯೋಗಿಸಬೇಕು ಎಂದರು.
ಕರವೇ ಜಿಲ್ಲಾ ವಕ್ತಾರ ಕೋಟೆ ಸೋಮಣ್ಣ ಮಾತನಾಡಿ, ಸಮಾಜದಲ್ಲಿ ನೇತ್ರ, ಬಿಪಿ, ಮಧುಮೇಹ ಸೇರಿದಂತೆ ಇನ್ನಿತರೆ ಉಚಿತ ಶಿಬಿರಗಳು ಕೇಳಿz್ದೆÃವೆ. ಆದರೆ ಪ್ರಪ್ರಥಮ ಬಾರಿಗೆ ಶ್ರವಣ ದೋಷದ ಉಚಿತ ಶಿಬಿರ ಆಯೋಜಿಸಿ ಅಸಹಾಯಕರಿಗೆ ಸ್ಪಂದಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವೈದ್ಯ ಡಾ. ಚಂದನ ಮಾತನಾಡಿ, ಇತ್ತೀಚೆಗೆ ಕಿವುಡತನ ಸಾಮಾನ್ಯವಾಗಿದೆ. ಅಲ್ಪಸ್ವಲ್ಪ ಕೇಳುವಿಕೆಯಲ್ಲಿ ಸಮಸ್ಯೆಯಿಲ್ಲ ಎಂದು ಜನತೆ ಸುಮ್ಮನಾಗುತ್ತಾರೆ. ದೊಡ್ಡಮಟ್ಟಿನ ಸಮಸ್ಯೆ ಕಂಡುಬAದರೆ ವೈದ್ಯರ ಬಳಿಗೆ ಬರುವ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸಣ್ಣಪುಟ್ಟ ಕಿವಿಯ ಸಮಸ್ಯೆಗಳು ಉಲ್ಬಣಿಸಿದಾಗ ಶೀಘ್ರವೇ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಿದರು.
ಇದೇ ವೇಳೆ ಸುಮಾರು ೩೦ಕ್ಕೂ ಹೆಚ್ಚು ಮಂದಿಗೆ ಶಿಬಿರದಲ್ಲಿ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೈದ್ಯ ಡಾ. ಲವಕುಮಾರ್, ಮುಖಂಡ ಶ್ರೀನಿವಾಸ್, ಸಿಬ್ಬಂದಿ ಲತಾ ಮತ್ತಿತರರಿದ್ದರು.