ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಇಲ್ಲಿಯ ಜೆ.ಜಿ. ಕಾಮರ್ಸ್ ಕಾಲೇಜ್ ಸಂಘಟಿಸಿದ್ದ ಆಕ್ಷನ್ ಕಟ್ ಕಿರುಚಿತ್ರ ಸ್ಪರ್ಧೆಯಲ್ಲಿ ಬ್ರೖೆಟ್ ಬಿಜಿನೆಸ್ ಸ್ಕೂಲ್ ವಿದ್ಯಾರ್ಥಿಗಳು 2 ಬಹುಮಾನಗಳನ್ನು ಪಡೆಯುವ ಮೂಲಕ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ.
ಉತ್ತಮ ಕಿರುಚಿತ್ರ ಹಾಗೂ ಉತ್ತಮ ನಿರ್ದೇಶಕ (ರಾಹುಲ ಮೇತ್ರಿ) ಪ್ರಶಸ್ತಿ ಪಡೆದಿದೆ. ಪೋಷಕರ ಬದುಕಿನ (ಪೇರೆಂಟ್ಸ್ ಲೈಫ್) ಸುತ್ತ ಹೆಣೆದ ಕಥಾವಸ್ತುವಿನ ಈ ಕಿರುಚಿತ್ರ ಪ್ರದರ್ಶನದಲ್ಲಿ ಈ ಭಾಗದ 15ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಪಾಲ್ಗೊಂಡಿದ್ದವು. ಬ್ರೖೆಟ್ ಬಿಜಿನೆಸ್ ಸ್ಕೂಲಿನ ತಂಡ ಕಲಾ ನೈಪುಣ್ಯತೆ, ಹಾವಭಾವ, ಆಂಗಿಕ ಅಭಿನಯಗಳಿಂದಾಗಿ ಪೋಷಕರ ತ್ಯಾಗ ಮನೋಭಾವ, ಪ್ರೀತಿ ಅಂತ:ಕರುಣಗಳನ್ನು ಅಭಿವ್ಯಕ್ತಿ ಪಡಿಸುವಲ್ಲಿ ಯಶಸ್ಸಿಯಾಯಿತು. ರಾಹುಲ್ ಮೇತ್ರಿ, ಓಂಕಾರ ಅಲಬೂರ, ಸೌರಭ ಸಂಗೂರಮಠ, ಅರ್ಜುನ ಅಂಗಡಿ, ಪಂಕಜ ಕುಮಾರ ಮ್ಯಾಗೇರಿ, ಗಂಗಾಧರ ಕಾಮತ್, ಸಾಕ್ಷಿ ಮೀರಜಕರ ಹಾಗೂ ರಕ್ಷಿತಾ ಆಕಳವಾಡಿ ತಂಡದಲ್ಲಿದ್ದರು.