ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ರಂಗಮಂಟಪದಲ್ಲಿ ಸಿಬಿಲ್ ಹಾಗೂ ಆನ್‌ಲೈನ್ ವಂಚನೆ ಕುರಿತು ಶುಕ್ರವಾರ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೂರು ಕಿರುನಾಟಕ ಪ್ರರ್ದರ್ಶಿಸಿದರು.
ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಹಿರಿಯ ವ್ಯವಸ್ಥಾಪಕ ಪದ್ಮನಾಭ್, ಶಾಖಾ ವ್ಯವಸ್ಥಾಪಕಿ ಭಾಮಿನಿ ರೆಡ್ಡಿ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಕಾಲೇಜಿನ ಪ್ರಾಂಶುಪಾಲರಾದ ಎ.ಜಿ.ಸಾಧನಾ, ಕೆ.ದೇವೇಂದ್ರಪ್ಪ ವಿದ್ಯಾರ್ಥಿಗಳ ಅಭಿಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.