ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ತಿಪಟೂರು ತಾಲೂಕು ಹಳೇಪಾಳ್ಯ ಗ್ರಾಮದ 13 ವರ್ಷದ ಬಾಲಕಿಯ
ತನ್ನ ದೇಹದ ಆರು ಅಂಗಾಂಗ ದಾನ ಮಾಡುವ ಮೂಲಕ ಕಿರಿಯ ವಯಸ್ಸಿನಲ್ಲೇ ಎಲ್ಲರಿಗೂ ಮಾದರಿ ಆಗಿದ್ದಾಳೆ. ನೋವಿನ ನಡುವೆಯೂ ಮಗಳ ದೇಹದ ಅಂಗಾಂಗ ದಾನ ಮಾಡಿ ಹೆತ್ತವರು ಸಾರ್ಥಕತೆ ಮೆರೆದಿದ್ದಾರೆ.
ಈ ಬಗ್ಗೆ ಸೋಮವಾರ ಹಿಮ್ಸ್‌ನ ನಿರ್ದೇಶಕ ಡಾ. ರಾಜಣ್ಣ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಗಾಂಗ ದಾನ ಮಾಡಲು
ಒಪ್ಪಿದ ಮೃತ ಬಾಲಕಿ ಚಂದನಾ ಪೋಷಕರ ದೃಢ ನಿರ್ಧಾರ ಶ್ಲಾಘನೀಯ ಎಂದರು.
ಚಂದನಾ ಪೋಷಕರು ಒಪ್ಪಿಗೆ ನೀಡಿದ ನಂತರ ಸೋಮವಾರ ಮುಂಜಾನೆ 3.30 ರಿಂದ ಬೆಳಗ್ಗೆ 6.30 ರ ವರೆಗೆ ನಿರಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಬೆಂಗಳೂರಿನ ಡಾ.ರಾಜೇಗೌಡರು ಹಾಗೂ ನಮ್ಮ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರು ಸೇರಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲೇ ಮೊದಲಿಗೆ ಹಿಮ್ಸ್ ಆಸ್ಪತ್ರೆ ಈ ಸಾಧನೆ ಮಾಡಿದೆ ಎಂದು ಹೇಳಿದರು.
ವಸಂತಕುಮಾರ್ ದಂಪತಿಯ ಹಿರಿಯ ಪುತ್ರಿ ಚಂದನಾ ಸತ್ತ ನಂತರವೂ, ಆರು ಮಂದಿಯ ಬಾಳಿಗೆ ಬೆಳೆಕಾಗಿದ್ದಾಳೆ ಎಂದು ಶ್ಲಾಘಿಸಿದರು. ಜು.23 ರಂದು ಎಂದಿನಂತೆ ಚಂದನಾ ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹಾಸನಕ್ಕೆ ಕರೆತರಲಾಗಿತ್ತು. ಅಲ್ಲಿಂದ ಜು.27 ರಂದು ಹಿಮ್ಸ್‌ಗೆ ಕರೆತಂದು ಮೆದುಳು ನಿಷ್ಕ್ರಿಯ ಆಗಿದೆ ಎಂಬುದನ್ನು ತಿಳಿದು ಆಪರೇಶನ್ ಮಾಡಲಾಯಿತು ಎಂದರು.
ಆಪರೇಷನ್ ಸಕ್ಸಸ್ ಆಗಿದ್ದು, ಹಿಮ್ಸ್‌ನಲ್ಲಿ ಈ ರೀತಿಯ ಚಿಕಿತ್ಸೆ ನಡೆದಿದ್ದು ಇದೇ ಮೊದಲು ಎಂದರು. ಅವರ ಹೃದಯ, ಲಿವರ್, ಕಿಡ್ನಿ ಮತ್ತು ಇತರೆ ಅಂಗಾಂಗಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದುದರಿಂದ ಅವರ ತಂದೆ-ತಾಯಿ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದರು ಎಂದು ಧನ್ಯವಾದ ಹೇಳಿದರು. ಈ ಮೂಲಕ ಚಂದನಾ ಬೇರೆಯವರಿಗೆ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಹನುಮಂತಪ್ಪ ಮಾತನಾಡಿ, ಇದೇ ರೀತಿ ಉಳಿದವರು ತಮ್ಮ ದೇಹದ ಅಂಗಾಂಗ ದಾನ ಮಾಡಲು ಮುಂದಾದರೆ ಒಬ್ಬರಿಂದ ಸುಮಾರು 8 ಮಂದಿಯನ್ನು ಉಳಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಮ್ಸ್ ಪ್ರಾಂಶುಪಾಲ ಡಾ. ಬಿ.ಸಿ. ರವಿಕುಮಾರ್, ಆಡಳಿತಾಧಿಕಾರಿ ರೇಖಾ, ಡಾ. ರಾಮನಾಥ್, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್, ಡಾ.ಅನುಪಮಾ, ಡಾ. ವಿಶ್ವನಾಥ್, ಡಾ.ಹಾಲೇಶ್, ಡಾ.ಮನು ಪ್ರಕಾಶ್ ಮೊದಲಾದವರಿದ್ದರು.
ಅಂಗಾಂಗ ದಾನಕ್ಕೆ ಮನವಿ:
ಅಂಗಾಂಗ ವೈಫಲ್ಯದಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕರಲ್ಲಿ ಅಂಗಾಂಗ ದಾನದ ಬಗ್ಗೆ ಸಾಕಷ್ಟು ಅರಿವು ಮೂಡಿಸಬೇಕಿದೆ.13 ವರ್ಷದ ಬಾಲಕಿ ಚಂದನಾ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರಿಗೆ ಬೆಳಕಾಗಿದ್ದಾಳೆ ಈಕೆ ಎಲ್ಲರಿಗೂ ಮಾದರಿ. ಇದೇ ರೀತಿ ಎಲ್ಲರೂ ಕೂಡ ತಮ್ಮ ಮರಣದ ನಂತರ ಅಂಗಾಂಗಗಳನ್ನು ದಾನ ಮಾಡುವಂತೆ ವೈದ್ಯರು ಮನವಿ ಮಾಡಿದರು.
ಸತ್ತ ಮೇಲೆ ಮನುಷ್ಯನ ಅಂಗಾಂಗಗಳು ಕೂಡ ಮಣ್ಣಲ್ಲಿ ಕೊಳೆತು ಹೋಗುತ್ತವೆ. ಇದರ ಬದಲು ಬದುಕಿರುವವರ ಜೀವನಕ್ಕೆ ಆಸರೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಅಂಗಾಂಗಳನ್ನ ದಾನ ಮಾಡುವಂತೆ ವಿನಂತಿಸಿದರು.
ರಾಜ್ಯದಲ್ಲಿ ಹಿಮ್ಸ್ ಆಸ್ಪತ್ರೆ ಮೊದಲು:
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ಯಶಸ್ವಿ ಚಿಕಿತ್ಸೆ ಮಾಡಿರುವ ಹೆಗ್ಗಳಿಕೆ ನಗರದ ಹಿಮ್ಸ್ ಆಸ್ಪತ್ರೆ ಸಲ್ಲುತ್ತದೆ.
ಚಂದನಾ ಎಂಬ ಬಾಲಕಿ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಅವರ ಪೋಷಕರು ಮಗಳ ಅಂಗಾಂಗವನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಇದರಿಂದ ನಮ್ಮ ತಜ್ಞರ ತಂಡ ಮತ್ತು ಬೆಂಗಳೂರಿನ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ.ರಾಜೇಗೌಡ ಅವರ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಈ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಅಂಗಾಂಗ ಶಸ್ತ್ರ ಚಿಕಿತ್ಸೆಗೆ ರಾಜ್ಯದ ಕೆಲ ಆಸ್ಪತ್ರೆಗಳಿಗೆ ಮಾತ್ರ ಸರ್ಕಾರ ಮಾನ್ಯತೆ ನೀಡಿದೆ. ಅದರಲ್ಲಿ ಹಾಸನದ ಆಸ್ಪತ್ರೆಯೂ ಕೂಡ ಒಂದು, ಈ ಹಿಂದೆಯೂ ಕೂಡ ಎರಡು ಬಾರಿ ಅಂಗಾಂಗ ದಾನ ಶಸ್ತ್ರಚಿಕಿತ್ಸೆ ಮಾಡಲು ಪ್ರಯತ್ನಿಸಿ ಕಾರಣಾಂತರಗಳಿಂದ ವಿಫಲವಾಗಿತ್ತು. ಆದರೆ ಈ ಬಾರಿ ಯಶಸ್ವಿಯಾಗಿ ಮಾಡುವ ಮೂಲಕ ಅಂಗಾಂಗಗಳನ್ನ ರವಾನಿಸಿಸಲಾಗಿದೆ.