ಜಿಲ್ಲೆ

ಕಿರಾಣಿ ವರ್ತಕರ ಸಂಘಕ್ಕೆ ಆಯ್ಕೆ

ಧಾರವಾಡ: ಸುಮಾರು 80 ವರ್ಷಗಳಷ್ಟು ಹಳೆಯದಾದ ನಗರದ ಕಿರಾಣಿ ವರ್ತಕರ ಸಂಘದ 2023-24ನೇ ವರ್ಷದ ಅವಧಿಗೆ ನೂತನ ಪದಾಧಿಕಾರಿಗಳಾಗಿ ಶಿವಮೂರ್ತಿ ಕೋಟೂರ (ಅಧ್ಯಕ್ಷ) ಹಾಗೂ ಮಹಾಂತೇಶ ಪಟ್ಟಣಶೆಟ್ಟಿ (ಕಾರ್ಯದರ್ಶಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ಜಗದೀಶ ಶಹಾ (ಉಪಾಧ್ಯಕ್ಷ), ಅನಿಲ ಕಲಾಲ (ಜಂಟಿ ಕಾರ್ಯದರ್ಶಿ), ಮಲ್ಲಿಕಾರ್ಜುನ ಹರಿಹರ (ಕೋಶಾಧ್ಯಕ್ಷ), ಸುಬ್ರಹ್ಮಣ್ಯ ಶೆಟ್ಟಿ, ಹಾಲಯ್ಯ ಹಂಗರಗಿ, ಮುಖೇಶ ಜೈನ್, ಶಿವಲಿಂಗ ಹಂಪಣ್ಣವರ, ಭರತ್ ಶಹಾ, ರಮೇಶ ಬಳ್ಳೂರ, ಸಚಿನ್ ದೊಡಮನಿ, ಶಿವಪ್ರಸಾದ ವಸ್ತ್ರದ, ಮಲ್ಲಿಕಾರ್ಜುನ ತುರಮರಿ ಹಾಗೂ ನಾಗಾರಾಮ ಚೌಧರಿ (ಕಾರ್ಯಕಾರಿ ಮಂಡಳಿ ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಮಹಾಂತೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.