ಜಿಲ್ಲೆ

ಕಿಮ್ಸ್​ಗೆ ಸ್ವಯಂಸೇವಕರ ನೆರವು

ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್್ಸ)ಗೆ 21 ಸ್ವಯಂ ಸೇವಕರ ನೆರವನ್ನು ಸೋಮವಾರ ಒದಗಿಸಲಾಯಿತು.

ಕಿಮ್್ಸ ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಫೌಂಡೇಷನ್ ಅಧ್ಯಕ್ಷ ನಂದಿನಿ ಕಶ್ಯಪ ಮಜೇಥಿಯಾ ಅವರು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಫಲಕ ಹಸ್ತಾಂತರದ ಮೂಲಕ ಈ ಸೇವೆಯನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜನರ ಆಶೀರ್ವಾದ ಮತ್ತು ಸಹಕಾರದಿಂದ ಸೇವೆ ನೀಡುವ

ಅವಕಾಶ ದೊರಕಿರುವುದು ನಮ್ಮ ಸೌಭಾಗ್ಯ’ ಎಂದು ಹೇಳಿದರು.

ಡಾ. ರಾಮಲಿಂಗಪ್ಪ ಮಾತನಾಡಿ, ಮಜೇಥಿಯಾ ಫೌಂಡೇಷನ್​ನ 21 ಸ್ವಯಂ ಸೇವಕರು ಕಿಮ್ಸ್​ಗೆ ಬರುವ ರೋಗಿಗಳು, ಜತೆಗಾರರಿಗೆ ಸಹಾಯ ಸಹಕಾರ ನೀಡಲಿದ್ದಾರೆ. ಮಾನವೀಯ ನೆಲೆಯಲ್ಲಿ ಫೌಂಡೇಷನ್​ನವರು ಶಿಕ್ಷಣ ಮತ್ತು ಆರೋಗ್ಯ, ಇತರ ಕ್ಷೇತ್ರದಲ್ಲಿ ನೀಡುತ್ತಿರುವ ಸೇವೆ ಅರ್ಥಪೂರ್ಣವಾಗಿದೆ ಎಂದು ಪ್ರಶಂಸಿಸಿದರು.

ಗಣ್ಯರಾದ ಡಾ. ರಾಜಶೇಖರ ದ್ಯಾಬೇರಿ, ಶಂಕರ ಹಿರೇಮಠ, ರಾಜೇಶ್ವರಿ ಜೈನಾಪುರ, ಚಂದ್ರಿಕಾ, ಫೌಂಡೇಷನ್ ಪದಾಧಿಕಾರಿ ಅಮರೇಶ ಹಿಪ್ಪರಗಿ, ಇತರರು ಇದ್ದರು.