ಹುಬ್ಬಳ್ಳಿ: ಇಲ್ಲಿಯ ಕಿಮ್ಸ್ನಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಸಮಾರೋಪ ಮಂಗಳವಾರ ನಡೆಯಿತು. ಜನವರಿ 30ರಿಂದ ಫೆಬ್ರವರಿ 13ರ ವರೆಗೆ ಅಭಿಯಾನ ನಡೆಸಲಾಯಿತು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಕುಷ್ಠರೋಗ ನಿಮೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು.
ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕುಷ್ಠರೋಗ ಜಾಗೃತಿ ಕಿರುನಾಟಕ ಪ್ರದರ್ಶಿಸಿದರು. ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ವತಿಯಿಂದ ಬ್ಲಾಂಕೆಟ್ಗಳನ್ನು ವಿತರಿಸಲಾಯಿತು.
ಡಾ. ನವ್ಯ, ಡಾ. ಸುಭಾಸ ಬಬ್ರುವಾಡ, ಡಾ. ಅನ್ನಪೂರ್ಣ ಸಾಲಿ, ಡಾ. ಚಂದ್ರಮೋಹನ, ಡಾ.ಎಸ್.ಬಿ. ಕಳಸೂರಮಠ, ಡಾ. ಕಮ್ಮಾರ, ಎಸ್.ಬಿ. ಶೆಟ್ಟಿ, ಅನ್ನಪೂರ್ಣ ಗಂಟಿಯವರ, ವಿಜಯಕುಮಾರ ಹೊನಕೇರಿ ಇತರರು ಇದ್ದರು.
ಎಚ್.ಬಿ. ರಾಮದುರ್ಗ ಸ್ವಾಗತಿಸಿದರು. ಜಿಲ್ಲಾ ಕುಷ್ಠರೋಗ ನಿಮೂಲನಾಧಿಕಾರಿ ಕಚೇರಿ ಸಿಬ್ಬಂದಿ, ತಾಲೂಕು ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.