ಹುಮನಾಬಾದ್: ಹಳ್ಳಿಖೇಡ (ಕೆ) ಗ್ರಾಮದಲ್ಲಿ ಸೋಮವಾರ ಸಂಜೆ ಜಿಟಿ, ಜಿಟಿ ಮಳೆಯ ಮಧ್ಯೆ ಶರಣ ಕಿನ್ನರಿ ಬಮ್ಮಯ್ಯ ರಥೋತ್ಸವ ಅಪಾರ ಜನಸ್ತೋಮದ ಮಧ್ಯ ಸಡಗರದಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಮಹಾ ರುದ್ರಾಭಿಷೇಕ, ಪೂಜೆ, ಭಜನೆ, ಮಧ್ಯಾಹ್ನ ದೇವಸ್ಥಾನದಿಂದ ರಥದ ವರೆಗೆ ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಗೀತ ವ್ಯಾದಮೇಳಗಳೊಂದಿಗೆ ಶ್ರದ್ಧಾ, ಭಕ್ತಿಯೊಂದಿಗೆ ಭಕ್ತರ ಜೈ ಘೋಷಗಳ ಮಧ್ಯೆ ವೈಭವದ ರಥೋತ್ಸವ ಆರಂಭಗೊಂಡಿತು. ಭಕ್ತರು ಬಾಳೆಹಣ್ಣು ಹಾರಿಸಿ ಹರಕೆ ತೀರಿಸಿದರು. ಬೀದರ್, ಕಲಬುರಗಿ ಜಿಲ್ಲೆಯ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ನಾಗರ ಪಂಚಮಿಗೆ ತವರು ಮನೆಗೆ ಹೋಗುವ ರೂಢಿಯಂತೆ, ಈ ಗ್ರಾಮದ ಮತ್ತು ಸುತ್ತಮುತ್ತಲಿನ ಮಹಿಳೆಯರು ಕಡ್ಡಾಯವಾಗಿ ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲ್ಲದೆ ಪುರುಷರು ಸಹ ಎಲ್ಲೆ ಇದ್ದರೂ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ ಇಲ್ಲಿದೆ.
ಕಲ್ಲೂರ ಹಿರೇಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯರು, ಡೊಂಗರಗಾಂವದ ಶ್ರೀ ಉದಯರಾಜಯೋಗೀಂದ್ರ ಸ್ವಾಮಿ ಹಾಗೂ ಸ್ಥಳೀಯ ಹಿರೇಮಠದ ಶ್ರೀ ಸಿದ್ಧರಾಮ ಸ್ವಾಮಿ ಸಾನ್ಯಿಧ್ಯದಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಗುಡ್ಡದೆಲ್ಲಡೆ ಭಕ್ತ ಸಮೂಹವೇ ಕಂಡು ಬಂದಿತ್ತು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಷ ವಾರದ, ಅಣ್ಣೆಪ್ಪ ರಟಕಲ್, ಭಕ್ತರಾಜ್ ಚಿತ್ತಾಪುರೆ, ಸುಭಾಷ ಚಿಲ್ಲಶೆಟ್ಟಿ, ವಿಶ್ವನಾಥ ಚಿಕ್ಕಪಾಟೀಲ್, ಗುಂಡಪ್ಪ ಕೋರಿ, ರಮೇಶ ವಾರದ, ಸಿದ್ರಾಮ ಇಂಡಿ, ಗುರುಬಸಯ್ಯ ಹಿರೇಮಠ, ಮಲ್ಲಯ್ಯ ಚಿಕ್ಕಮಠ, ಧರ್ಮರಾಜ ಉಪಾರ, ಭೀಮಶಾ ಕೋರಿ, ಉದಯಕುಮಾರ ವಾರದ, ಮಹಾದೇವ ಗೀರಿ, ಇಂದ್ರಕರಣ ಬಿರಾದಾರ, ಬಸವರಾಜ ಪಡಶೆಟ್ಟಿ, ರಮೇಶ ಪರೀಟ್, ಬಮ್ಮಣ್ಣ ಹೂಗಾರ, ಸಂಜು ಸಿದ್ದೇಶ್ವರ, ಸಿದ್ದು ಇಂಡಿ, ಸಾಗರ ಭುರಿ, ಡಾ.ಚಿದಾನಂದ ಚಿಕ್ಕಮಠ, ಪ್ರಕಾಶ ಬಾವಗಿ, ಮೈಲಾರಿ ಬುಕ್ಕಾ, ಶಂಕರ ಹೊನ್ನಳ್ಳಿ ಸೇರಿ ಗಣ್ಯರು, ಗ್ರಾಮದ ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸ್ವೆಯಂ ಸೇವಕರು, ಸುತ್ತಮುತ್ತಲ್ಲಿನ ಗ್ರಾಮಗಳ ಗಣ್ಯರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉತ್ಸವ ಧಾರ್ಮಿಕತೆ ಸಂಕೇತ: ಗ್ರಾಮದ ಕಿನ್ನರಿ ಬೊಮ್ಮಯ್ಯನವರ ೫೬ನೇ ಜಾತ್ರೋತ್ಸವ ಭಾನುವಾರ ಸಂಜೆ ಆರಂಭಗೊಂಡಿದ್ದು, ದೇವಸ್ಥಾನದಲ್ಲಿ ಗದ್ದುಗೆಯ ಪಾದಪೂಜೆ ಹಾಗೂ ಜಾತ್ರಾ ಉತ್ಸವ ಉದ್ಘಾಟನೆ ಶಾಸಕ ಡಾ.ಸಿದ್ದಲಿಂಗಪ್ಪ ನೆರವೇರಿಸಿ ಮಾತನಾಡಿ, ಜಾತ್ರಾ ಉತ್ಸವ ಧಾರ್ಮಿಕತೆ ಹಾಗೂ ಭಾವೈಕತೆಯ ಸಂಕೇತವಾಗಿದೆ. ಶರಣ ಕಿನ್ನರಿ ಬೊಮ್ಮಯ್ಯನವರ ತತ್ವ ಆದರ್ಶಗಳು ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು. ಮಳಖೇಡದ ಶ್ರೀ ಕಾರ್ತಿಕೇಶ್ವರ ಸ್ವಾಮಿ ಸಾನ್ನಿಧ್ಯ, ಸ್ಥಳೀಯ ಶ್ರೀ ಸಿದ್ದರಾಮ ಸ್ವಾಮಿ ನೇತೃತ್ವ ವಹಿಸಿದ್ದರು. ಭಾಜಪ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಶೋಕ ಹಂಚಲಿ ಅನುಭಾವ ನೀಡಿದರು. ಗ್ರಾಪಂ ಅಧ್ಯಕ್ಷ ಶಿವಕುಮಾರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಕಲಬುರಗಿ ತೆರಿಗೆ ಸಹಾಯಕ ಆಯುಕ್ತ ಮಹೇಶ ಪಾಟೀಲ್ ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.