ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯ ಸೈನಿಕ ವಸತಿ ಶಾಲೆಯ ಆಡಳಿತ ಮಂಡಳಿ ಚೇರ್ಮನ್ ಆಗಿ ಆಯ್ಕೆಯಾದ ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರನ್ನು ನೂತನ ಸದಸ್ಯರು ಅಭಿನಂದಿಸಿದರು. ವಿ.ಐ. ಪಾಟೀಲ, ಎಸ್.ಜಿ.ಪಾಟೀಲ, ಗಿರೀಶ ಪಾಟೀಲ, ರೂಪಾಲಿ ನಾಯಕ ಇದ್ದರು. 
ಜಿಲ್ಲೆ

ಕಿತ್ತೂರು ಸೈನಿಕ ಶಾಲೆಗೆ ಕವಟಗಿಮಠ ಚೇರ್ಮನ್

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರು ಸ್ಥಾಪಿಸಿದ ದೇಶದ ಪ್ರತಿಷ್ಠಿತ ಹಾಗೂ ರಾಜ್ಯದ ಏಕೈಕ ಬಾಲಕಿಯರ ವಸತಿ ಶಾಲೆಯಾದ ಕಿತ್ತೂರು ರಾಣಿ ಚನ್ನಮ್ಮ ಸೈನಿಕ ವಸತಿ ಶಾಲೆಯ ಆಡಳಿತ ಮಂಡಳಿ ಚೇರ್ಮನ್ ಆಗಿ ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ನೇಮಕಗೊಂಡಿದ್ದಾರೆ.

ಸದಸ್ಯ ಕಾರ್ಯದರ್ಶಿಯಾಗಿ ಮಾಜಿ ಶಾಸಕ ಡಾ.ವಿ.ಐ. ಪಾಟೀಲ, ಸದಸ್ಯರಾಗಿ ಎಸ್.ಜಿ. ಪಾಟೀಲ, ಗಿರೀಶ ಪಾಟೀಲ, ರೂಪಾಲಿ ನಾಯಕ ನೇಮಕಗೊಂಡಿದ್ದಾರೆ. ಹಳೇ ಕಮಿಟಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ದೈನಂದಿನ ಶಾಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಈ 5 ಜನರ ನೂತನ ಕಮಿಟಿ ರಚನೆ ಮಾಡಲಾಗಿದೆ.